ನ.1ರಂದು ’ಕನ್ನಡ ಹಬ್ಬ’ ಕಾರ್ಯಕ್ರಮ

ಕುಂದಾಪುರ, ಅ.27: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕರ್ನಾಟಕ ರಾಜ್ಯೋತ್ಸವ ವನ್ನು ಕನ್ನಡ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷ ರಾಜ್ಯೋತ್ಸವವನ್ನು ಹೊಸ ಪ್ರಯೋಗದೊಂದಿಗೆ ಆಚರಿಸಲು ಮುಂದಾ ಗಿದೆ. ಬಹುವರ್ಷಗಳ ನಂತರ ಕುಂದಾಪುರದಲ್ಲಿ ಹವ್ಯಾಸಿ ಕಲಾವಿದರಿಂದ ಸಾಮಾಜಿಕ ನಾಟಕ ನಡೆಸಲಾಗುತ್ತಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕಚೇರಿಯಲ್ಲಿ ಕನ್ನಡ ಹಬ್ಬ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು. ನ.1ರಂದು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಸಂಜೆ 4 ಗಂಟೆಯಿಂದ ಕಲಾಕ್ಷೇತ್ರದ ಗೀತ ಗಾಯನ ತಂಡದಿಂದ ಕನ್ನಡ ಗೀತ ಗಾಯನ ನಡೆಯಲಿದ್ದು, 5.30ಕ್ಕೆ ಕಾರ್ಯಕ್ರಮ ವನ್ನು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿರುವರು.
ಬಳಿಕ ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ವರದರಾಜ್ ಪೈ ಕುಂದಾಪುರ ನಿರ್ದೇಶನದ, ಬಿ.ಕಿಶೋರ್ ಕುಮಾರ್ ರಚಿಸಿರುವ ಹವ್ಯಾಸಿ ಕಲಾವಿದರು ಅಭಿನಯಿಸುವ ಸಾಮಾಜಿಕ ನಾಟಕ ’ಶಾಂತಿ ಧಾಮ’ ಪ್ರದರ್ಶನಗೊಳ್ಳಲಿದೆ ಎಂದರು.
ಉದ್ಯಮಿ ಪ್ರಶಾಂತ್ ತೋಳಾರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವಕೀಲ ಪ್ರಕಾಶ್ಚಂದ್ರ ಶೆಟ್ಟಿ, ನಾಟಕದ ನಿರ್ದೇಶಕ ವರದರಾಜ ಪೈ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಬಿ.ಎನ್. ಸ್ವಾಗತಿಸಿ ವಂದಿಸಿದರು.




