Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. 1 ವರ್ಷ 9 ತಿಂಗಳ ಕಂದಮ್ಮ ʼಹನ್ವಿಕಾ...

1 ವರ್ಷ 9 ತಿಂಗಳ ಕಂದಮ್ಮ ʼಹನ್ವಿಕಾ ದೇವಾಡಿಗʼ ಅಪರೂಪದ ಸಾಧನೆ

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ9 Oct 2025 7:26 PM IST
share
1 ವರ್ಷ 9 ತಿಂಗಳ ಕಂದಮ್ಮ ʼಹನ್ವಿಕಾ ದೇವಾಡಿಗʼ ಅಪರೂಪದ ಸಾಧನೆ

ಕುಂದಾಪುರ: 2 ವರ್ಷದೊಳಗಿನ ಪುಟಾಣಿ ಕಂದಮ್ಮ ವಿಶ್ವ ಹಾಗೂ ರಾಜ್ಯಮಟ್ಟದಲ್ಲಿ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿ ಮುಡಿಗೇರಿಸಿ ಕೊಂಡು ಸಾಧನೆ ಮಾಡಿದ್ದು, ಆಕೆಯ ವಿಶೇಷ ಆಸಕ್ತಿಗೆ ಪೋಷಕರು ಪ್ರೋತ್ಸಾಹ ನೀಡುವ ಮೂಲಕ ಆಕೆಯ ಸುಪ್ತ ಪ್ರತಿಭೆ ಬೆಳಕಿಗೆ ಬರಲು ವಿಶೇಷ ಪರಿಶ್ರಮ ಪಡುತಿದ್ದಾರೆ.

ಪಡುಕೋಣೆ ಮೂಲದ ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿರುವ ಸಚೀಂದ್ರ ಆರ್. ದೇವಾಡಿಗ ಹಾಗೂ ಗೃಹಿಣಿ ಶ್ವೇತಾ ದೇವಾಡಿಗರ ಪುತ್ರಿ ಹನ್ವಿಕಾ ಎಸ್. ದೇವಾಡಿಗ 1 ವರ್ಷ 6 ತಿಂಗಳು ಇರುವಾಗಲೇ 15 ವಿಭಾಗ ಗಳಲ್ಲಿ ಸಾಧನೆ ಮಾಡಿ ಇಂಟರ್‌ನೇಶನಲ್ ವರ್ಲ್ಡ್ ಎಕ್ಸಲೆನ್ಸ್- ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದಿದ್ದು ಇದೀಗ 1.9 ವರ್ಷವಾಗುವಾಗ ‘ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್’ ಪ್ರಶಸ್ತಿ ಪಡೆದಿದ್ದಾರೆ.

ಕುಟುಂಬಿಕರ ಪ್ರೋತ್ಸಾಹ: ಹನ್ವಿಕಾ 7 ತಿಂಗಳು ಇರುವಾಗಲೇ ಕೆಲವೊಂದು ಮಾತುಗಳಿಗೆ ಕೈ ಸನ್ನೆ, ಬಾಯ್ಸನ್ನೆ ಮೂಲಕ ಪ್ರತಿಕ್ರಿಯಿಸು ವುದನ್ನು ಪೋಷಕರು ಗಮನಿಸಿದ್ದಾರೆ. ಹಾಗೆಯೇ ಅವಳಲ್ಲಿ ವಿಶೇಷವಾದ ಸ್ಮರಣ ಶಕ್ತಿ ಇರುವುದು ಅರಿತು, ಅವಳನ್ನು ಪ್ರೋತ್ಸಾಹಿಸುತ್ತಾ ಬಂದರು. ಕ್ರಮೇಣ ಅವಳಲ್ಲಿ ಆಸಕ್ತಿ ಹೆಚ್ಚುತ್ತಾ ಹೋದಂತೆ ಇದನ್ನು ಅರಿತ ಅಮ್ಮ, ಅಜ್ಜ, ಅಜ್ಜಿ ಅವಳನ್ನು ಮತ್ತಷ್ಟು ಪ್ರೋತ್ಸಾಹಿಸಿ ಪ್ರತಿಯೊಂದು ತಿಳಿಸುವುದರ ಮೂಲಕ ಅವಳ ಪ್ರತಿಕ್ರಿಯೆ ಗಮನಿಸಿದರು. ಅವಳಿಗೆ ಅಗಾಧವಾದ ಆಸಕ್ತಿ ಇರುವುದು ಕಂಡುಬಂದಿದ್ದರಿಂದ ಎಲ್ಲವನ್ನು ತಿಳಿಸುವ ಕಾರ್ಯಕ್ಕೆ ಮುಂದಾದರು.

ಆದರೆ ಹನ್ವಿಕಾಳಿಗೆ ವಿಶೇಷ ತರಬೇತಿಯ ಅಗತ್ಯವಿರಲಿಲ್ಲ. ಒಂದು ಬಾರಿ ಹೇಳಿ ಮರುದಿನ ಕೇಳಿದರೂ ಅದನ್ನು ಥಟ್ ಎಂದು ತನ್ನ ತೊದಲು ನುಡಿಯಲ್ಲೇ ಹೇಳುವುದು ಕಂಡು ಸಂಪೂರ್ಣ ಕುಟುಂಬ ಆಕೆಗೆ ಪ್ರೋತ್ಸಾಹ ನೀಡಿತು.

ಪುಟಾಣಿಯ ಸಾಧನೆ: ಇನ್ನೂ ಎರಡು ವರ್ಷ ತುಂಬದ ಪುಟಾಣಿ ಹನ್ವಿಕಾ 30ಕ್ಕೂ ಹೆಚ್ಚು ತರಕಾರಿಗಳು ಗುರುತಿಸು ವುದು, 40ಕ್ಕೂ ಹೆಚ್ಚು ಪ್ರಾಣಿಗಳನ್ನು ಗುರುತಿಸುವುದು ಹಾಗೆ 20ಕ್ಕೂ ಹೆಚ್ಚು ವಾಹನಗಳು, 30ಹಣ್ಣುಗಳು, 11 ಮೇಕ್‌ಅಪ್ ಪ್ರಾಡಕ್ಟಗಳು, 20 ದೇಹದ ಭಾಗಗಳು, 30ಪಕ್ಷಿಗಳು, 9 ವಿವಿಧ ಬಟ್ಟೆಗಳು, 10 ಭಾವನೆಗಳನ್ನು ವ್ಯಕ್ತಪಡಿಸುವುದು, 100ಕ್ಕಿಂತ ಜಾಸ್ತಿ ಶಬ್ದವನ್ನು ಪುನರಾವರ್ತಿಸುವುದು, ಅ-ಅಃ, ಎ-ಝಡ್ ಪುನರಾವರ್ತಿಸಿ ದಾಖಲೆ ಮಾಡಿದ್ದಾಳೆ. ಹಾಗೆಯೇ ಈ ವಯಸ್ಸಲ್ಲಿ ಯಾರೂ ಎತ್ತಿರದ ಭಾರವನ್ನು ಎತ್ತಿದ ಮಗು ಎಂದು ಗುರುತಿ ಸಲಾಗಿದೆ. ಲೆಮನ್ ಅಂಡ್ ಸ್ಫೂನ್ ಆಟದಲ್ಲಿ ಕೇವಲ 1 ನಿಮಿಷ 25 ಸೆಕೆಂಡ್‌ಗಳಲ್ಲಿ 125 ಮೀ. ದೂರವನ್ನು ಯಶಸ್ವಿ ಯಾಗಿ ಕ್ರಮಿಸಿದ್ದಾಳೆ.

"ಸಣ್ಣ ವಯಸ್ಸಿನಲ್ಲಿ ಹನ್ವಿಕಾ ನಮ್ಮ ಜೊತೆ ಮಾಡುತ್ತಿದ್ದ ಸಂವಹನ ಪ್ರಕ್ರಿಯೆ, ಆಕೆಯ ಗೃಹಣ ಸಾಮರ್ಥ್ಯ ಕಂಡು ನಾವು ಅಚ್ಚರಿಪಟ್ಟೆವು. ಅವಳ ಸಾಧನೆಗೆ ಕುಟುಂಬದ ಎಲ್ಲರೂ ಪ್ರೋತ್ಸಾಹಿಸಿದೆವು. ಹೀಗಾಗಿ ಅವಳಿಗಿದ್ದ ವಿಶೇಷ ಸಾಮರ್ಥ್ಯಕ್ಕೆ 1 ವರ್ಷ 9 ತಿಂಗಳೊಳಗೆ ಎರಡು ಪ್ರಮುಖ ಪ್ರಶಸ್ತಿಗಳು ದೊರಕಿದ್ದು ಸಂತಸವಾಗಿದೆ".

-ಶ್ವೇತಾ ದೇವಾಡಿಗ, ಹನ್ವಿಕಾ ಎಸ್. ದೇವಾಡಿಗ ತಾಯಿ

‘ನನ್ನ ಮಗಳು ಹನ್ವಿಕಾ 1 ವರ್ಷ 9 ತಿಂಗಳಿನಲ್ಲೇ ವಿಶ್ವ ಮತ್ತು ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿ ರುವುದು ನಮಗೆ ತುಂಬಾ ಹೆಮ್ಮೆ ಯಾಗಿದೆ. ಅವಳ ಅರ್ಹತೆ ಗಮನಿಸಿ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಹೋಲ್ಡರ್ ಎಂಬ ಎರಡು ಪ್ರಶಸ್ತಿ ಪಡೆದು ವಿಶ್ವ ದಾಖಲೆ ಮಾಡಿರುವುದು ನಿಜಕ್ಕೂ ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ.

-ಸಚೀಂದ್ರ ಆರ್. ದೇವಾಡಿಗ, ಹನ್ವಿಕಾ ತಂದೆ.

share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X