ಜೂ.10ರಂದು ಪಿಂಚಣಿ ಅದಾಲತ್
ಉಡುಪಿ, ಜೂ.9: ಪಿಎಫ್ ಹಾಗೂ ಪೆನ್ಶನ್ ಅದಾಲತ್ ನಾಳೆ ಜೂ.10ರಂದು ಪೂರ್ವಾಹ್ನ 11:30ಕ್ಕೆ ಉಡುಪಿ ತುಳುನಾಡು ಟವರ್ಸ್‌ನಲ್ಲಿರುವ ಪ್ರಾದೇಶಿಕ ಪಿಎಫ್ ಕಮಿಷನರ್-11 ಕಚೇರಿಯಲ್ಲಿ ನಡೆಯಲಿದೆ.
ಈ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಉಡುಪಿ ಜಿಲ್ಲೆಯ ಇಪಿಎಫ್ ಪಿಂಚಣಿದಾರರು ಈ ಅದಾಲತ್‌ನಲ್ಲಿ ಭಾಗವಹಿಸಬಹುದು. ದೂರಿಗೆ ಸಂಬಂಧಿಸಿದಂತೆ ಎಲ್ಲಾ ಮೂಲ ದಾಖಲೆ ಪ್ರತಿಗಳನ್ನು ಅವರು ತರಬೇಕು. ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ಉದ್ಯೋಗಿಗಳು, ಉದ್ಯೋಗದಾತರು ಹಾಗೂ ಪಿಂಚಣಿ ದಾರರು ಇದರ ಪ್ರಯೋಜನ ಪಡೆಯ ಬಹುದು ಎಂದು ಪ್ರಾದೇಶಿಕ ಪಿಎಫ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story