10 ವರ್ಷಗಳಲ್ಲಿ ಹೆಚ್ಚಳವಾದ ಜನರ ಸೇರ್ಪಡೆಗೆ ಮರು ಜಾತಿಗಣತಿ: ಗೃಹ ಸಚಿವರಿಂದ ಸಮಜಾಯಿಷಿ

ಉಡುಪಿ: ಮುಖ್ಯಮಂತ್ರಿಗಳು ಹಾಗೂ ಸಂಪುಟದ ತೀರ್ಮಾನ ದಂತೆ ರಾಜ್ಯದಲ್ಲಿ ಜನಗಣತಿ ಹಾಗೂ ಜಾತಿಗಣತಿಯ ಸರ್ವೆಯನ್ನು ಮತ್ತೆ ನಡೆಸಲು ನಿರ್ಧರಿಸಿದ್ದೇವೆ. ಅದಕ್ಕೆ ಸೂಕ್ತ ಕಾರಣಗಳನ್ನು ಸಹ ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾಗಿದ್ದ ಎಚ್.ಕಾಂತರಾಜು ಹಾಗೂ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ‘ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ’ (ಜಾತಿಗಣತಿ) ವರದಿಯ ಮರು ಸರ್ವೇ ನಡೆಸಲು ಕೈಗೊಂಡ ನಿರ್ಧಾರಕ್ಕೆ ಸಂಬಂದಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತಿದ್ದರು.
ಮೊದಲನೇಯದು ಅನೇಕ ಜನಸಮುದಾಯ, ಸಂಘ ಸಂಸ್ಥೆಗಳು ಜಾತಿ ಜನಗಣತಿಯಲ್ಲಿ ತಮ್ಮ ಸಮು ದಾಯದ ಅಂಕಿ ಅಂಶ ಸರಿಯಿಲ್ಲ. ನಮ್ಮ ಸಮುದಾಯದ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಅಂಶವೆಂದರೆ ಜಾತಿ, ಜನಗಣತಿಯನ್ನು ಹತ್ತು ವರ್ಷಗಳ ಹಿಂದೆ (2015-16ರಲ್ಲಿ) ಮಾಡ ಲಾಗಿದೆ. ಇದರಲ್ಲಿ ಹಳೆಯ ಡೇಟಾ ಇದೆ. ಹತ್ತು ವರ್ಷಗಳ ಹಿಂದಿನ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ ಎಂದು ಬಹಳಷ್ಟು ಮಂದಿ ಆಕ್ಷೇಪ ಎತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಸೇರ್ಪಡೆ ಆಗಿರೋದನ್ನು ಗಣನೆಗೆ ತೆಗೆದುಕೊಳ್ಳಲು ಸಲಹೆ ಬಂದಿತ್ತು. ಜನರ ಅಭಿಪ್ರಾಯವನ್ನು ಪರಿಗ ಣಿಸಿ ಮರು ಜಾತಿ ಜನ ಗಣತಿಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಡಾ.ಪರಮೇಶ್ವರ್ ಮರು ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.
ಜನರ ಸಲಹೆಯಂತೆಯೊ ಅಥವಾ ಹೈಕಮಾಂಡನ್‌ನ ಸಲಹೆಯಂತೆ ಮರು ಸರ್ವೆ ನಡೆಯುತ್ತಿದೆಯೇ ಎಂದು ಮರು ಪ್ರಶ್ನಿಸಿದಾಗ, ಅದೂ ಇದೆ. ಆದರೆ ಜನರ ಭಾವನೆ ಅರಿತೇ ಹೈಕಮಾಂಡ್ ಮರು ಜಾತಿ ಜನಗಣತಿಗೆ ಸೂಚನೆ ನೀಡಿದೆ ಎಂದರು.
ಇದರಿಂದ ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆಯವರು ವೈಜ್ಞಾನಿಕ ವಾಗಿ ಮಾಡಿರುವ ಜಾತಿ ಜನಗಣತಿ ಮೂಲೆಗುಂಪು ಆಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಇಲ್ಲ ಅದು ಮೂಲೆಗುಂಪಾಗುವುದಿಲ್ಲ ಎಂದ ಸಚಿವರು, ಅದನ್ನೇ ನಾವು ಮುಂದುವರಿಸುತ್ತೇವೆ. 10 ವರ್ಷಗಳಲ್ಲಿ ಒಂದೂವರೆ ಕೋಟಿ ಜನ ಸೇರ್ಪಡೆಗೊಂಡಿದ್ದಾರಲ್ಲ. ಅವರನ್ನು ಸೇರಿಸಿ ಸರ್ವೆ ಮಾಡುತ್ತೇವೆ ಎಂದರು.
ಹಿಂದಿನ ವರದಿ ಅತ್ಯಂತ ವೈಜ್ಞಾನಿಕವಾಗಿಯೇ ನಡೆದಿದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆ ಅಡಿಪಾ ಯದ ಮೇಲೆ ಮರು ಜಾತಿ ಜನಗಣತಿ ನಡೆಯಲಿದೆ. ಅದಕ್ಕೆ ಒಂದೂವರೆ ಕೋಟಿ ಜನರ ಸೇರ್ಪಡೆಯಾ ಗಲಿದೆ ಎಂದವರು ವಿವರಿಸಿದರು.
ನೋಡಿ ನಾವು ಮಾಡಿರುವುದು ಕೇವಲ ಜಾತಿಗಣತಿಯಲ್ಲ. ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡಿದ್ದೇವೆ. ವರದಿಯಲ್ಲಿ ಇವುಗಳನ್ನೆಲ್ಲಾ ಪ್ರಸ್ತಾಪ ಮಾಡಲಾಗಿದೆ. ಕೆಲವರು ಭಾರತ ಸರಕಾರ ದೇಶದ ಜನಗಣತಿ ಮಾಡುತ್ತಿರುವುದರಿಂದ ಮತ್ತೆ ಜಾತಿ ಜನಗಣತಿ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಆದರೆ ಕೇಂದ್ರ ಸರ್ಕಾರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕೇವಲ ಜನಗಣತಿ ಮಾತ್ರ ಮಾಡುತ್ತಿದೆ. ರಾಜ್ಯ ಸರಕಾರ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯನ್ನೂ ಮಾಡುತ್ತೆ. ಸಾಮಾಜಿಕ, ಶೈಕ್ಷಣಿಕವಾಗಿ ಸ್ಥಿತಿಗತಿ ಅಧ್ಯ ಯನ ಹಾಗೂ ಜೊತೆ ಹೊಸ ಅಂಕಿಅಂಶಗಳನ್ನು ಸೇರಿಸಿ ವರದಿ ನೀಡಲು ಈಗಾಗಲೇ ಸೂಚಿಸಲಾಗಿದೆ ಎಂದು ಡಾ.ಪರಮೇಶ್ವರ್ ತಿಳಿಸಿದರು.







