ಇಸ್ಪೀಟು ಜುಗಾರಿ ಆರೋಪ: 10 ಮಂದಿ ಬಂಧನ

ಬ್ರಹ್ಮಾವರ, ಮಾ.8: ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ಎಂಬಲ್ಲಿ ಮಾ.7ರಂದು ರಾತ್ರಿ ವೇಳೆ ಗರಗರ ಮಂಡಲ ಇಸ್ಪೀಟು ಜುಗಾರಿ ಆಡುತಿದ್ದ 10 ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಹರೀಶ್, ಗುರುರಾಜ್, ವೆಂಕಟೇಶ್ ಪೂಜಾರಿ, ಹರ್ಷ, ಸುರೇಶ್ ನಾಯ್ಕ, ರಾಜ ನಾಯ್ಕ, ಪೀಟರ್ ಡಿಮೆಲ್ಲೋ, ನಾಗೇಶ, ನಾಗರಾಜ, ರಾಜೇಶ ಬಂಧಿತ ಆರೋಪಿಗಳು. ಇವರಿಂದ 24500 ರೂ. ಮೌಲ್ಯದ 9 ಮೊಬೈಲ್ ಫೋನ್, 1.20ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





