100 ಮಂದಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಪ್ರಕ್ರಿಯೆ

ಉಡುಪಿ, ಜು.7: ಡಾ.ಡಿ.ವೀರೇಂದ್ರ ಹೆಗ್ಗಡೆ ಜ್ಞಾನ ದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ 1000 ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕಾತಿ ಮಾಡಿದ್ದು, ಉಡುಪಿ ಜಿಲ್ಲೆಗೆ ಮಂಜೂರಾತಿ ಆದ 100 ಮಂದಿ ಜ್ಞಾನದೀಪ ಶಿಕ್ಷಕರ ಸಂದರ್ಶನ ಪ್ರಕ್ರಿಯೆ ಮಂಗಳವಾರ ಉಡುಪಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಸೌಧ ಕಟ್ಟಡದಲ್ಲಿ ಜರಗಿತು.
ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ನಿರ್ದೇಶಕ ನಾಗರಾಜ ಶೆಟ್ಟಿ ಉದ್ಘಾಟಿಸಿ, ಸಮುದಾಯಾಭಿವೃದ್ಧಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಕೇಂದ್ರ ಕಛೇರಿಯ ಸಮುದಾಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಶೇಖರ್ ಜ್ಞಾನ ದೀಪ ಶಿಕ್ಷಕರ ಕರ್ತವ್ಯದ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಎಂ.ಐ.ಎಸ್. ಯೋಜನಾಧಿಕಾರಿ ಸ್ವಪ್ನ ಪ್ರಕಾಶ್, ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ, ಬಾಲಕೃಷ್ಣ ಹಿರಿಂಜ, ಉಮೇಶ್, ಸುಧೀರ್, ರಮೇಶ್ ಪಿ.ಕೆ. ಮತ್ತು ತರಬೇತೆ ಸಂಸ್ಥೆಯ ಪ್ರಾಂಶುಪಾಲೆ ಅನಿತಾ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಚೇರಿ ಪ್ರಬಂಧಕಿ ಜ್ಯೋತಿ ಸ್ವಾಗತಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು. ನಿತೇಶ್ ವಂದಿಸಿದರು.




