10.25ಲಕ್ಷ ರೂ. ಮೊತ್ತದ ವಿದ್ಯಾ ಸಹಾಯಧನ ವಿತರಣೆ

ಉಡುಪಿ, ಜೂ.5: ಪುತ್ತೂರು ವಿದ್ಯಾನಿಧಿ ಸಮಿತಿಯ ಮಹಾಸಭೆ ಮತ್ತು ವಿವಿಧ ವಿದ್ಯಾದಾನ ವಿತರಣಾ ಕಾರ್ಯಕ್ರಮ ವಿದ್ಯಾ ದೇಗುಲದ ಸುಜ್ಞಾನ ಮಂಟಪದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಡಾ.ಪ್ರಕಾಶತ್ಮ ಬೆಳ್ಮಣ್ಣು ಮಾತನಾಡಿದರು. ವೆಂಕಟರಮಣ ಭಟ್ ಉಂಡಾರು 65 ಮಕ್ಕಳಿಗೆ 10.25ಲಕ್ಷ ಸಹಾಯಧನ ವಿತರಿಸಿದರು. ಸುರೇಖಾ ಎನ್ ಭಟ್ ಮತ್ತು ವಿಮಲಾ ಜಿ ರಾವ್ ಅವರನ್ನು ಅವರ ಸಹಾಯಧನದಿಂದ ಓದುತ್ತಿರುವ ಮಕ್ಕಳು ಸನ್ಮಾನಿಸಿದರು.
ನಿವೃತ್ತ ಸುಬೇದಾರ್ ರಘುಪತಿ ರಾವ್ ಅವರನ್ನು ಸನ್ಮಾನಿಸಿ, ಜೀವದ ಹಂಗು ತೊರೆದು ದೇಶಕ್ಕಾಗಿ ದುಡಿದ ಸೈನಿಕರ ಕಲ್ಯಾಣ ನಿಧಿಗಾಗಿ ಸಮಿತಿಯ ಆರೋಗ್ಯ ನಿಧಿಯಿಂದ ಮತ್ತು ಸಹೃದಯ ದಾನಿಗಳು ನೀಡಿದ 2.10ಲಕ್ಷ ರೂ. ದೇಣಿಗೆಯನ್ನು ಅಧ್ಯಕ್ಷ ವೀಣಾ ಹತ್ವಾರ್ ಹಸ್ತಾಂತರಿಸಿದರು.
ಉಪಾಧ್ಯಕ್ಷ ದೇವರಾಜ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾಧವ ಭಟ್, ಮಾಯಾಗುಂಡಿ, ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯಾಯ, ಕೋಶಾಧಿಕಾರಿ ಕೃಷ್ಣರಾಜ ರಾವ್, ಹರಿಪ್ರಸಾದ್, ವಾಸುದೇವ ಭಟ್, ಪುರಂದರ ರಾವ್ ಸಹಕರಿಸಿದರು. ಡಾ.ಶ್ರೀಧರ ಬಾಯಿರಿ ಕಾರ್ಯಕ್ರಮ ನಿರೂಪಿಸಿದರು.





