ಜೂ.12ರಂದು ಹೂಡೆಯಲ್ಲಿ ವಾರ್ಷಿಕ ಕಾರ್ಯಕ್ರಮ
ಉಡುಪಿ: ಜಿಲ್ಲಾ ಜಮೀಯತ್ ಅಹ್ಲೆ ಹದೀಸ್ ಆಶ್ರಯದಲ್ಲಿ ಹೂಡೆಯ ಮದ್ರಸಾ ಉಬೈ ಬಿನ್ ಕಾಬ್ ವತಿಯಿಂದ ಮದ್ರಸಾ ಉಬೈ ಬಿನ್ ಕಾಬ್ ಹೂಡೆ ವಾರ್ಷಿಕ ಕಾರ್ಯಕ್ರಮ ಜೂ.12ರಂದು ರಾತ್ರಿ 9ಗಂಟೆಯಿಂದ ಹೂಡೆಯ ಜದೀದ್ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಜಾಮಿಯ ದಾರುಸ್ಸಲಾಮ್ ಉಮರಾಬಾದ್ ತಮಿಳುನಾಡು ಇದರ ಉಪ ಪ್ರಾಂಶುಪಾಲ ಶೇಕ್ ಹಾಫೀಝ್ ಅಬ್ದುಲ್ ಅಝೀಮ್ ಉಮರಿ ಮದನಿ ಪ್ರವಚನ ನೀಡಲಿರುವರು. ಅಧ್ಯಕ್ಷತೆಯನ್ನು ಜಮೀಯತ್ ಅಹ್ಲೆ ಹದೀಸ್ ಉಡುಪಿ ಜಿಲ್ಲಾಧ್ಯಕ್ಷ ಅತೀಫ್ ಹುಸೈನ್ ವಹಿಸಲಿರುವರು. ಕಾರ್ಯಕ್ರಮದಲ್ಲಿ ಕುರ್‌ಆನ್ ಹಿಫ್ಜ್ ಮಾಡಿದ ವಿದ್ಯಾರ್ಥಿ ಗಳನ್ನು ಹಿಫ್ಝ್ ಸನದ್ ನೀಡಿ ಸನ್ಮಾನಿಸಲಾ ಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story





