ನ.12ರಂದು ಗ್ರಾಮೀಣ ಅಂಚೆ ನೌಕರರ ಮುಷ್ಕರ

ಉಡುಪಿ, ನ.9: ಗ್ರಾಮೀಣ ಅಂಚೆ ನೌಕರರ ದೇಶವ್ಯಾಪಿ ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗದ ನೇತೃತ್ವದಲ್ಲಿ ನ.12ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಉಡುಪಿ ಪ್ರಧಾನ ಅಂಚೆ ಕಛೇರಿಯ ಮುಂಭಾಗದಲ್ಲಿ ಮುಷ್ಕರ ನಡೆಯಲಿದೆ.
ಗ್ರಾಮೀನ ಅಂಚೆ ನೌಕರರ 8ನೇ ವೇತನ ಆಯೋಗದ ಶಿಫಾರಸ್ಸು ಹಾಗೂ ಜಾರಿಗೊಳಿಸುವ ಹಾಗೂ 60 ಸಾವಿರ ಜಿಡಿಎಸ್ ಹುದ್ದೆಗಳನ್ನು ರದ್ದು ಗೊಳಿಸುವ ಇಲಾಖೆಯ ನಿರ್ಧಾರದ ವಿರುದ್ಧ, ಜಿಡಿಎಸ್ ನೌಕರರಿಗೆ ಸರಕಾರಿ ನೌಕರರ ಸ್ಥಾನಮಾನ ನೀಡುವ ಕುರಿತು, ಪಿಂಚಣಿ ಸೌಲಭ್ಯ ಮತ್ತು ಅನಗತ್ಯ ಗುರಿಗಳನ್ನು ತೆಗೆದು ಹಾಕಿ ಕಿರುಕುಳ ನಿಲ್ಲಿಸು ವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
Next Story




