1.25 ಲಕ್ಷ ರೂ. ಮೌಲ್ಯದ ಅಡಿಕೆ ಕಳವು : ಪ್ರಕರಣ ದಾಖಲು

ಶಂಕರನಾರಾಯಣ, ಡಿ.9: ಮನೆಯ ಶೆಡ್‌ನಲ್ಲಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕಳವಾಗಿರುವ ಘಟನೆ ಡಿ.8ರಂದು ರಾತ್ರಿ ವೇಳೆ ಹಾಲಾಡಿ ಎಂಬಲ್ಲಿ ನಡೆದಿದೆ.
ಸೀತಾರಾಮ ಎಂಬವರ ಮನೆಯ ಕಾರ್ ಶೆಡ್ ಪಕ್ಕದ ಖಾಲಿ ಜಾಗದಲ್ಲಿ 25 ಚೀಲಗಳಲ್ಲಿ ತುಂಬಿಸಿ ಕೂಡಿಟ್ಟ ಸುಮಾರು 1,25,000ರೂ. ಮೌಲ್ಯದ 625ಕೆ.ಜಿ. ಸಿಪ್ಪೆ ಅಡಿಕೆಯನ್ನು ಕಳ್ಳರು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





