ಸೆ.13ರಂದು ಮೀಲಾದ್ ಜಾಥಾ: ಯಶಸ್ವಿಗೆ ಕರೆ

ಉಡುಪಿ, ಸೆ.4: ಉಡುಪಿ ಜಿಲ್ಲಾ ಸುನ್ನೀ ಕೋಓರ್ಡಿನೇಶನ್ ವತಿಯಿಂದ ಮೌಲಿದ್ ಮಜ್ಲಿಸ್ ಹಾಗೂ ಬೃಹತ್ ಮೀಲಾದ್ ಜಾಥವನ್ನು ಸೆ.13ರಂದು ಹಮ್ಮಿಕೊಳ್ಳಲಾಗಿದೆ.
ಉಡುಪಿ ಅಂಜುಮನ್ ಮಸೀದಿಯಲ್ಲಿ ಮಧ್ಯಾಹ್ನ 2.30ಕ್ಕೆ ಮೌಲಿದ್ ಮಜ್ಲಿಸ್ ನಡೆಯಲಿದ್ದು, ಬಳಿಕ ಮೂರು ಗಂಟೆಗೆ ಜಾಥ ಹೊರಡಲಿದೆ. ಈ ಜಾಥವನ್ನು ಯಶಸ್ವಿಗೊಳಿಸುವಂತೆ ಸುನ್ನೀ ಮೇನೇಜ್‌ಮೆಂಟ್ ಅಸೋಸಿ ಯೇಷನ್ ಉಡುಪಿ ಜಿಲ್ಲಾ ಘಟಕವು ಕರೆ ನೀಡಿದೆ.
ಅಧ್ಯಕ್ಷ ಹುಸೇನ್ ಪಡುಕರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸುನ್ನೀ ನಾಯಕ ಅಬ್ದುಲ್ ಮಜೀದ್ ಹನೀಫೀ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಕೆ.ಅಬ್ದುಲ್ ರಶೀದ್ ಸಖಾಫಿ ಮಜೂರು ವಿಷಯ ಮಂಡಿಸಿದರು. ಎನ್.ಸಿ.ರಹೀಮ್ ಹೊಸ್ಮಾರು ಹಾಗೂ ಕೋಶಾಧಿಕಾರಿ ಇದ್ದಿನಬ್ಬ ಉಚ್ಚಿಲ, ಮುಹಮ್ಮದ್ ಮನ್ಸೂರ್ ಹಾಜಿ ಕೋಡಿ, ಬಾವಾ ಹಾಜಿ ಮೂಳೂರು, ಶಾಂತಿಪ್ರಿಯ ಯೂಸುಫ್ ಹಾಜಿ ಕುಂದಾಪುರ, ಎಸ್.ಎಂ.ಎ.ಉಚ್ಚಿಲ ರೀಜನಲ್ ಅಧ್ಯಕ್ಷ ವೈಬಿಸಿ ಬಾವ, ಮುಹಮ್ಮದ್ ಉಪಸ್ಥಿತರಿದ್ದರು.
Next Story





