ನ.13ರಂದು ಅಂಬಲಪಾಡಿ ಗ್ರಾಮದವರ ಅಗ್ರಿಗೋಲ್ಡ್ ಬಾಂಡ್ ಪರಿಶೀಲನೆ

ಉಡುಪಿ, ನ.12: ತಾಲೂಕಿನ ಅಂಬಲಪಾಡಿ ಗ್ರಾಮದವರ ಅಗ್ರಿಗೋಲ್ಡ್ ಬಾಂಡ್ ಪರಿಶೀಲನೆ ನ.13ರಂದು ನಡೆಸಲಾಗುವುದು. ಈಗಾಗಲೇ ಅಂಬಲಪಾಡಿ ಗ್ರಾಮದ 100 ಮಂದಿಗೆ ಟೋಕನ್ ನೀಡಲಾಗಿದ್ದು, ಇನ್ನುಳಿದ 50 ಟೋಕನ್ಗಳನ್ನು ಮೊದಲ ಬಂದ 50 ಮಂದಿಗೆ ಆದ್ಯತೆಯಂತೆ ನೀಡಲಾಗುವುದು.
ಶುಕ್ರವಾರ ಡಿಎಆರ್ ಕೇಂದ್ರಸ್ಥಾನ ಚಂದು ಮೈದಾನದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಟೋಕನ್ಗಳನ್ನು ನೀಡಲಾಗುವುದು ಹಾಗೂ ಬಾಂಡ್ಗಳ ಪರಿಶೀಲನೆಯೂ ಅಲ್ಲಿಯೇ ನಡೆಯಲಿದೆ. ಇನ್ನುಳಿದ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಮಸ್ಥರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ಉಡುಪಿ ಜಿಲ್ಲಾ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ತಿಳಿಸಲಾಗುವುದು ಎಂದು ಜಿಲ್ಲಾ ಪೊಲೀಸರ ಪ್ರಕಟಣೆ ತಿಳಿಸಿದೆ.
Next Story




