ಫೆ.14: ಗಾಂಧಿಯನ್ ಸೆಂಟರ್‌ನಲ್ಲಿ ‘ಹಿಯರ್ ಓ ಮಹಾತ್ಮ’ ಚಿತ್ರಪ್ರದರ್ಶನ
ಉಡುಪಿ, ಫೆ.13:ಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಪಿ.ಎನ್. ರಾಮಚಂದ್ರ ಅವರ ಇತ್ತೀಚಿನ ಚಿತ್ರ ‘ಹಿಯರ್ ಓ, ಮಹಾತ್ಮಾ’ ಇದರ ಪ್ರದರ್ಶನ ಹಾಗೂ ಚಿತ್ರದ ಕುರಿತು ಸಂವಾದ ಕಾರ್ಯಕ್ರಮವನ್ನು ಫೆ.14ರ ಶುಕ್ರವಾರ ಮಣಿಪಾಲದಲ್ಲಿರುವ ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್) ಇದರ ಸರ್ವೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಸಿಪಿಎಎಸ್ ಮತ್ತು ಉಡುಪಿ ಚಿತ್ರ ಸಮಾಜ ಜೊತೆಯಾಗಿ ಈ ಪ್ರದರ್ಶನವನ್ನು ಆಯೋಜಿಸಿವೆ. ಅಪರಾಹ್ನ 2 ಗಂಟೆಗೆ ಚಿತ್ರ ನಿರ್ದೇಶಕ ಪಿ.ಎನ್.ರಾಮಚಂದ್ರ ಚಿತ್ರದ ಕುರಿತು ಮಾತನಾಡಲಿದ್ದು, ಬಳಿಕ ಸಂಜೆ 5 ಗಂಟೆಗೆ ‘ಹಿಯರ್ ಓ, ಮಹಾತ್ಮಾ’ ಚಿತ್ರದ ಪ್ರದರ್ಶನ ನಡೆಯಲಿದೆ ಎಂದು ಜಿಸಿಪಿಎಎಸ್‌ನ ಪ್ರಕಟಣೆ ತಿಳಿಸಿದೆ.
Next Story





