ನ.15ರಂದು ಬೆಂಗಳೂರು-ಮಡಗಾಂವ್ ’ವಂದೇಭಾರತ್’ಗೆ ಕುಂದಾಪುರದಲ್ಲಿ ಸ್ವಾಗತ

ಕುಂದಾಪುರ, ನ.11: ಬಹುಕಾಲದ ಕನಸ್ಸಾಗಿದ್ದ ಬೆಂಗಳೂರು- ಮಂಗಳೂರು-ಮಡಗಾಂವ್ ವಂದೇಭಾರತ ರೈಲಿಗೆ ನ.13ಕ್ಕೆ ಬೆಂಗಳೂರಿ ನಲ್ಲಿ ಪ್ರಧಾನಿ ಚಾಲನೆ ನೀಡಲಿದ್ದು, ಮಡಗಾಂವ್ನಿಂದ ಅಧೀಕೃತ ಪ್ರಯಾಣ ಬೆಳೆಸುವ ರೈಲನ್ನು ಕುಂದಾಪುರದಲ್ಲಿ ನ.15ರಂದು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಈ ರೈಲಿನಿಂದ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ವಂದೇ ಭಾರತ್ ಮೂಲಕ ವೇಗವಾಗಿ ಬೆಂಗಳೂರು ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ ಮಾತನಾಡಿ, ಬೆಂಗಳೂರು-ಕರಾವಳಿಗೆ ಈ ರೈಲು ಯಾನ ಜೋಡಿಸುವ ಮೂಲಕ ಇಲ್ಲಿನ ಪ್ರವಾಸೋದ್ಯಮ, ಶಿಕ್ಷಣ, ವಾಣಿಜ್ಯ, ಧಾರ್ಮಿಕ ಕ್ಷೇತ್ರಕ್ಕೂ ಅನುಕೂಲಕರವಾಗಲಿದ್ದು ಕರಾವಳಿ- ಬೆಂಗಳೂರು ನಡುವೆ ಸಂಚರಿಸುವ ವೇಗದ ರೈಲು ಇದಾಗಿದೆ. ಒಂದಷ್ಟು ಸಮಸ್ಯೆಗಳು ನಿವಾರಣೆಯಾದರೆ ಇನ್ನೂ 1 ಗಂಟೆ ಸಂಚಾರ ಕಡಿಮೆಯಾಗಲಿದೆ ಎಂದರು.
ಸಮಿತಿಯ ತಾಂತ್ರಿಕ ಸಲಹೆಗಾರ ಪ್ರಥ್ವಿ ಕುಂದರ್, ವಿವೇಕ್ ನಾಯಕ್ ಉಪಸ್ಥಿತರಿದ್ದರು.






