ಎ.17: ಮತದಾನ ಕೇಂದ್ರದ ಸಿಬ್ಬಂದಿಗೆ ಎರಡನೇ ಸುತ್ತಿನ ತರಬೇತಿ

ಉಡುಪಿ, ಎ.14: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಮತದಾನ ದಿನದಂದು ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಎ.17ರಂದು ವಿಧಾನ ಸಭಾ ಕ್ಷೇತ್ರದ ಮಟ್ಟದಲ್ಲಿ ಎರಡನೇ ಹಂತದ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದವರಿಗೆ ಕುಂದಾಪುರ ಭಂಡಾರ್‌ಕರ್ಸ್ ಕಾಲೇಜು, ಉಡುಪಿ ವಿಧಾನಸಭಾ ಕ್ಷೇತ್ರದ ವರಿಗೆ ಉಡುಪಿ ಬ್ರಹ್ಮಗಿರಿ ಸೈಂಟ್ ಸಿಸಿಲಿಸ್ ಸ್ಕೂಲ್, ಕಾಪು ವಿಧಾನಸಭಾ ಕ್ಷೇತ್ರದವರಿಗೆ ಉಳಿಯಾರಗೊಳಿ ದಂಡ ತೀರ್ಥ ಪಿ.ಯು.ಕಾಲೇಜು, ಕಾರ್ಕಳ ವಿಧಾನಸಭಾ ಕ್ಷೇತ್ರದವರಿಗೆ ಕಾರ್ಕಳ ಕ್ರೈಸ್ಟ್ ಕಿಂಗ್ ಪಿ.ಯು.ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದೆ.
ಎರಡನೇ ಹಂತದ ತರಬೇತಿಗೆ ನಿಯೋಜಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರಕ್ಕೆ ಭಾಗವಹಿಸಲು ಅನುಕೂಲ ವಾಗುವಂತೆ ಉಚಿತ ಬಸ್‌ಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದೆ. ತರಬೇತಿ ಸ್ಥಳಗಳಿಗೆ ಪ್ರಯಾಣಿಸಲು ಈ ಕೆಳಗೆ ತಿಳಿಸಿರುವ ಸ್ಥಳಗಳಿಂದ ಬಸ್ಸುಗಳು ಹೊರಡಲಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ತಾಲೂಕು ಆಡಳಿತ ಸೌಧದಿಂದ(ಹೆಚ್ಚಿನ ಮಾಹಿತಿಗಾಗಿ ಮೇಲ್ವಿಚಾರಕರು ಮೊ:9482036207, 8431059053, 9036681599, 8095782859, 9743816440) ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಕುಂದಾಪುರ ಗಾಂಧಿ ಮೈದಾನದಿಂದ (ಮೊ.ಸಂ.:9341049161, 8197809032, 7483054340), ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ(ಮೊ.ಸಂ.: 9164156545, 9844218717, 9880913596), ಕಾಪು ವಿಧಾನಸಭಾ ಕ್ಷೇತ್ರದ ಕಾಪು ಸರ್ವಿಸ್ ಬಸ್ ನಿಲ್ದಾಣ(ಮೊ.ಸಂ.: 9972716555, 9845162068, 8095101024) ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಪೇಟೆ ಬಸ್ ನಿಲ್ದಾಣ ಮತ್ತು ಬಂಡೀಮಠ ಬಸ್ ನಿಲ್ದಾಣದಿಂದ (ಮೊ.ಸಂ.: 8197028656, 8277404724, 8073752849) ಬಸ್‌ಗಳು ಹೊರಡಲಿದೆ.
ಮತದಾನ ದಿನದಂದು ಕರ್ತವ್ಯಕ್ಕೆ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಎ.17ರಂದು ಪೂರ್ವಾಹ್ನ 7 ಗಂಟೆಗೆ ಈ ಸ್ಥಳಗಳಲ್ಲಿ ಹಾಜರಿರ ಬೇಕು. ಎಲ್ಲಾ ಮತಗಟ್ಟೆ ಸಿಬ್ಬಂದಿಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗ ತಕ್ಕದ್ದು. ತಪ್ಪಿದ್ದಲ್ಲಿ ಜನಪ್ರತಿನಿಧಿ ಕಾಯ್ದೆ 1951 ಕಲಂ 134ರನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.






