ಮಾ.17ಕ್ಕೆ ಪುತಿನರ ಗೀತನಾಟಕ ‘ಹರಿಣಾಭಿಸರಣ’ ಯಕ್ಷಗಾನ ಶೈಲಿಯಲ್ಲಿ ಪ್ರದರ್ಶನ
ಉಡುಪಿ, ಮಾ.14:ಕನ್ನಡ ಹಿರಿಯ ಸಾಹಿತಿ, ಕವಿ ಪು.ತಿ.ನರಸಿಂಹಾಚಾರ್ ಅವರ 120ನೇ ಜನ್ಮದಿನದ ಸಂದರ್ಭದಲ್ಲಿ ಬೆಂಗಳೂರಿನ ಡಾ.ಪು.ತಿ.ನ. ಟ್ರಸ್ಟ್‌ನ ಸಹಯೋಗದಲ್ಲಿ ಅವರ ಕೃತಿಯೊಂದು ಯಕ್ಷಗಾನದ ಮೂಲಕ ಪ್ರಸ್ತುತಗೊಳ್ಳಲಿದೆ. ಪುತಿನ ಅವರ 120ನೇ ಜನ್ಮದಿನದ ಅಂಗವಾಗಿ ಮಾ.17ರ ಸೋಮವಾರ ಬೆಂಗಳೂರಿನಲ್ಲಿ ಇದು ಪ್ರದರ್ಶನಗೊಳ್ಳಲಿದೆ.
ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್, ಕೃಷ್ಣಮೂರ್ತಿ ತುಂಗ ಅವರ ನಿರ್ದೇಶನದಲ್ಲಿ ಪುತಿನ ವಿರಚಿತ ಪ್ರಸಿದ್ಧ ಗೀತನಾಟಕ ‘ಹರಿಣಾಭಿಸರಣ’ ವನ್ನು ಯಕ್ಷಗಾನ ಶೈಲಿಯಲ್ಲಿ ಪ್ರದರ್ಶಿಸಲಿದೆ. ಮಾ.17ರ ಸಂಜೆ 5:00ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನ 14ನೇ ಅಡ್ಡರಸ್ತೆಯಲ್ಲಿರುವ ಸೇವಾಸದನದಲ್ಲಿ ಈ ವಿನೂತನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಮಂಡ್ಯ ಪುತಿನ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಎಂ. ಕೃಷ್ಣೇಗೌಡ, ಲೇಖಕ, ಪತ್ರಕರ್ತ ಎನ್.ಎಸ್ ಶ್ರೀಧರ ಮೂರ್ತಿ, ಮಂಡ್ಯ ರಮೇಶ್, ಕೆ.ಜೆ.ನಾರಾಯಣ ಮೈಸೂರು, ಡಾ.ಆನಂದರಾಮ ಉಪಾಧ್ಯ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
Next Story





