ಸೆ.17ರಂದು ಕಾಪು ಪುರಸಭಾ ಗ್ರಂಥಾಲಯದಲ್ಲಿ ಸಾಹಿತಿ ಸೌರಭ

ಉಡುಪಿ, ಸೆ.15: ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ಕಾಪು ಪುರಸಭಾ ಗ್ರಂಥಾಲಯದಲ್ಲಿ ಸೆ.17ರಂದು ಅಪರಾಹ್ನ 3 ಗಂಟೆಗೆ ಗ್ರಂಥಾಲಯದಲ್ಲಿ ಸಾಹಿತಿ ಸೌರಭ ಕಾರ್ಯಕ್ರಮ ನಡೆಯಲಿದೆ.
ಈ ವಾರದ ಸಾಹಿತಿಯಾಗಿ 2026ರ ಮಯೂರವರ್ಮ ಪ್ರಶಸ್ತಿ ವಿಜೇತೆ ಯುವ ಲೇಖಕಿ ಹಾಗೂ ಕತೆಗಾರ್ತಿ ಫಾತಿಮಾ ರಲಿಯಾ ಹೆಜಮಾಡಿ ಇವರು ತಾವು ಬರೆದ ಪುಸ್ತಕದ ಕುರಿತು ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿ ಪ್ರಕಟಣೆ ತಿಳಿಸಿದೆ.
Next Story




