ಆ.17: ಬೆಂಗಳೂರಲ್ಲಿ ವಿದೇಶದಲ್ಲಿ ಅಧ್ಯಯನ -2025

ಉಡುಪಿ, ಆ.13: ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಾರದರ್ಶಕ, ಮೌಲ್ಯಾಧಾರಿತ ಮತ್ತು ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ನೀಡುವ ಮೂಲಕ ಜಾಗತಿಕ ಶಿಕ್ಷಣದ ಪ್ರಯಾಣವನ್ನು ಸರಳೀಕರಿಸಲು ಮತ್ತು ಸುರಕ್ಷಿತಗೊಳಿಸಲು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ‘ವಿದೇಶದಲ್ಲಿ ಅಧ್ಯಯನ- 2025’ ಕಾರ್ಯಕ್ರಮವನ್ನು ಆಗಸ್ಟ್ 17ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಆಯೋಜಿಸ ಲಾಗಿದೆ.
ಕಾರ್ಯಕ್ರಮಲ್ಲಿ 10ಕ್ಕೂ ಹೆಚ್ಚು ರಾಷ್ಟ್ರಗಳ, 50ಕ್ಕೂ ಮೇಲ್ಪಟ್ಟ ಜಾಗತಿಕ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಮುಂದುವ ರೆಸಲು ಆಸಕ್ತಿಯುಳ್ಳವರು ಬೆಂಗಳೂರಿನಲ್ಲಿ ನಡೆಯುವ ‘ವಿದೇಶದಲ್ಲಿ ಅಧ್ಯಯನ- 2025’ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಜಿಲ್ಲೆಯಾದ್ಯಂತ ಅರ್ಹ ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 16ರ ಒಳಗೆ ಲಿಂಕ್ - https://studyabroad.ksdckarnataka.com - ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.





