2 ದಿನಗಳಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಅಪಘಾತದ ಗಾಯಾಳು ರಕ್ಷಣೆ

ಉಡುಪಿ ಫೆ.18, ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಎರಡು ದಿನಗಳ ಕಾಲ ರಸ್ತೆ ಬದಿಯಲ್ಲಿ ಏಳಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಪಾದಚಾರಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿದ್ದಾರೆ.
ಗಾಯಗೊಂಡವರನ್ನು ಕೂಲಿ ಕಾರ್ಮಿಕ ಮೂಡಬಿದ್ರೆ ಮೂಲದ ನಾರಾಯಣ ಮೊಗೇರ(58) ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ಇವರಿಗೆ ಬೈಕ್ ಢಿಕ್ಕಿ ಹೊಡೆದಿದ್ದು, ಇದರಿಂದ ಗಾಯಗೊಂಡ ಅವರ ಇವರ ನೆರವಿಗೆ ಯಾರೂ ಸ್ಪಂದಿಸದ ಕಾರಣ ಎರಡು ದಿನಗಳಿಂದ ರಸ್ತೆ ಬದಿಯ ಮರದಡಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಇದ್ದರು.
ಈ ಬಗ್ಗೆ ರೈಲ್ವೆ ಉದ್ಯೋಗಿ ಸದಾನಂದ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ತೆರಳಿದ ಅವರು ಗಾಯಳನ್ನು ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
Next Story





