ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ ರೈಲಿಗೆ 2 ಹೆಚ್ಚುವರಿ ತಾತ್ಕಾಲಿಕ ಬೋಗಿ

ಉಡುಪಿ, ಡಿ.25: ಕ್ರಿಸ್ಮಸ್ ಮತ್ತು ಹೊಸವರ್ಷದಲ್ಲಿ ಜನರ ಬೇಡಿಕೆಯ ಕಾರಣಕ್ಕಾಗಿ ಯಶವಂತಪುರ- ಕಾರವಾರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ತಾತ್ಕಾಲಿಕವಾಗಿ ಎರಡು ಹೆಚ್ಚುವರಿ ಬೋಗಿಗಳ ಸೇರ್ಪಡೆಗೆ ನೈಋತ್ಯ ರೈಲ್ವೆ ನಿರ್ಧರಿಸಿದೆ.
ಡಿ.27ರ ಶನಿವಾರ ಯಶವಂತಪುರದಿಂದ ಕಾರವಾರಕ್ಕೆ ತೆರಳುವ ರೈಲು ನಂ. 06267 ಹಾಗೂ ಡಿ.28ರ ರವಿವಾರ ಕಾರವಾರದಿಂದ ಯಶವಂತಪುರಕ್ಕೆ ತೆರಳುವ ರೈಲು ನಂ. 06268 ಎರಡು ಹೆಚ್ಚುವರಿ ಬೋಗಿಗಳೊಂದಿಗೆ ಸಂಚರಿಸಲಿವೆ.
ಈ ರೈಲಿನಲ್ಲಿ 2ಟಯರ್ ಎಸಿ-2, 3ಟಯರ್ ಎಸಿ-3, ಸ್ಲೀಪರ್-12, ಜನರಲ್-4, ಎಸ್‌ಎಲ್‌ಆರ್‌ಡಿ-2 ಸೇರಿದಂತೆ ಒಟ್ಟು 23 ಬೋಗಿಗಳನ್ನು ಈ ರೈಲು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಅಲ್ಲದೇ ತಿರುನಲ್ವೇಲಿ ಹಾಗೂ ದಾದರ್ ನಡುವೆ ಸಂಚರಿಸುವ ಸಾಪ್ತಾಹಿಕ ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು 3ಟಯರ್ ಎಸಿ ಬೋಗಿಯನ್ನು ಹೆಚ್ಚುವರಿಯಾಗಿ ಶಾಶ್ವತ ನೆಲೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





