ಸೆ.20ರಂದು ಅಂ.ರಾ. ಕರಾವಳಿ ಸ್ವಚ್ಛತಾ ದಿನ: ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

ಉಡುಪಿ: ಸೆ.20 ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ (ಇಂಟರ್‌ನ್ಯಾಷನಲ್ ಕೋಸ್ಟಲ್ ಕ್ಲೀನ್ ಅಪ್ ಡೇ) ಆಗಿದ್ದು, ಇದರ ಅಂಗ ವಾಗಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಪ್ರಾಧಿಕಾರ, ಮಾಹೆ ಗ್ರೂಪ್ ಮಣಿಪಾಲ ಹಾಗೂ ಮೆ.ಕ್ಲೀನ್ ಕುಂದಾಪುರ, ಮೆ.ಕ್ಲೀನ್ ಕಿನಾರ ಬೈಂದೂರು, ಮೆ.ಪಡುವಣ ಫೆಂಡ್ಸ್ ಬೈಂದೂರು, ಮೆ.ಸ್ವಚ್ಛಂ ಅಡ್ವೆಂಚರ್ಸ್ ಕಾಪು, ಮೆ. ಖಾರ್ವಿ ಆನ್ ಲೈನ್ ತ್ರಾಸಿ ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರಮುಖ ಬೀಚುಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯ ಮಲ್ಪೆ ಬೀಚ್, ಕಾಪು ಬೀಚ್, ಬ್ಲೂಫ್ಲಾಗ್ ಬೀಚ್‌ನಿಂದ ಪಡುಬಿದ್ರೆ ಮುಖ್ಯ ಬೀಚ್, ಹೂಡೆ/ಡೆಲ್ಟಾ ಬೀಚ್, ಕೋಡಿ ಕುಂದಾಪುರ ಬೀಚ್, ತ್ರಾಸಿ-ಮರವಂತೆ ಬೀಚ್ ಮತ್ತು ಪಡುವರಿ ಸೋಮೇಶ್ವರ ಬೀಚ್ ಗಳಲ್ಲಿ ಬೆಳಿಗ್ಗೆ 7:00ರಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲು ಉದ್ಧೇಶಿಸಲಾಗಿದೆ.
ಪ್ರಪಂಚದಾದ್ಯಂತ ಆಚರಿಸಲಾಗುತ್ತಿರುವ ಈ ದಿನದಂದು ಸಮುದ್ರದ ಜೀವವೈವಿಧ್ಯತೆ ರಕ್ಷಣೆ ಮತ್ತು ಪ್ಲಾಸ್ಟಿಕ್‌ನಿಂದ ಆಗುವ ಮಾಲಿನ್ಯದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತದೆ. ಕರಾವಳಿಯನ್ನು ಸ್ವಚ್ಛವಾಗಿರಿ ಸಲು ಸಾರ್ವಜನಿಕರು, ಸ್ಥಳೀಯರು, ಸಂಘ-ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಚ್ಛತಾ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.





