ಸೆ.20-26: ವಾರ್ಷಿಕ ವಿಶೇಷ ಶಿಬಿರ

ಉಡುಪಿ, ಸೆ.18: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಅಂಗವಾಗಿ ವಾರ್ಷಿಕ ವಿಶೇಷ ಶಿಬಿರವು ಸೆಪ್ಟಂಬರ್ 20ರಿಂದ 26ರವರೆಗೆ ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸೆ.20ರಂದು ಅಪರಾಹ್ನ 3:30ಕ್ಕೆ ಶಾಸಕ ಯಶ್‌ಪಾಲ್ ಎ ಸುವರ್ಣ ಉದ್ಘಾಟಿಸಲಿದ್ದು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಬಾಲಕಿಯರ ಸ.ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾಲೇಜಿನ ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷ ರತ್ನಾಕರ, ಖಜಾಂಜಿ ಶೇಖರ್ ಎನ್ ಕೋಟ್ಯಾನ್, ನಿವೃತ್ತ ಉಪನ್ಯಾಸಕ ದಯಾನಂದ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ವಿದ್ಯಾಸಂಸ್ಥೆಯ ಸುತ್ತಮುತ್ತಲಿನ ಜಾಗ ಮತ್ತು ಮೈದಾನದ ಸ್ವಚ್ಛತೆ, ಪ್ಲಾಸ್ಟಿಕ್ ರಹಿತ ಪರಿಸರದ ಅರಿವು ಮತ್ತು ನಿರ್ವಹಣಾ ಕ್ರಮಗಳು, ಕರಕುಶಲ ತರಬೇತಿ, ಜಾಥಾ, ಜೀವನ ಮೌಲ್ಯಗಳು ಸೇರಿದಂತೆ ವಿವಿದ ಕಾರ್ಯಕ್ರಮಗಳು ನಡೆಯಲಿವೆ.





