ಜೂ.21: ಸುಪ್ತದೀಪ್ತಿ ಅವರ ದ್ವಿಕೃತಿ ಅನಾವರಣ

ಉಡುಪಿ: ’ಸುಪ್ತದೀಪ್ತಿ’ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಜ್ಯೋತಿ ಮಹಾದೇವ್ ಅವರ ಪ್ರಬಂಧ ಮತ್ತು ಕವನ ಸಂಕಲನಗಳ ಅನಾವರಣ ಜೂನ್ 21ರಂದು ಅಪರಾಹ್ನ 3.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸಲಿರುವರು. ಅಕ್ಷರ ಲೋಕದ ನೋಟಗಳು ಪ್ರಬಂಧ ಸಂಕಲನವನ್ನು ಆರ್.ಆರ್.ಸಿ ಸಹ ಸಂಶೋಧಕ ಡಾ.ಅರುಣ್ ಕುಮಾರ್ ಎಸ್. ಆರ್. ಹಾಗೂ ಕವನ ಸಂಕಲನ ದೀಪ ನಕ್ಕಿತು ಕೃತಿಯನ್ನು ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಬಿಡುಗಡೆಗೊಳಿಸ ಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





