21ನೆ ದಿನವೂ ಮುಂದುವರೆದ ಕೊರಗರ ಧರಣಿ

ಉಡುಪಿ, ಜ.4: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ರವಿವಾರ 21ನೆ ದಿನಕ್ಕೆ ಕಾಲಿರಿಸಿದ್ದು, ಬೇಡಿಕೆ ಈಡೇರಿಸುವಂತೆ ಧರಣಿಯನ್ನು ಮುಂದುವರೆಸಲಾಗಿದೆ.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಮಾಜಿ ಅಧ್ಯಕ್ಷೆ ಅಮ್ಮಣ್ಣೆ ಚೋರಾಡಿ, ಸಂಯೋಜಕ ಕೆ.ಪುತ್ರನ್ ಹೆಬ್ರಿ, ಪ್ರಮುಖರಾದ ಸುಪ್ರಿಯಾ ಕಿನ್ನಿಗೋಳಿ, ಸುರೇಶ್ ಕಾಪು, ದಿವಾಕರ ಕಳ್ತೂರು, ಆಶಾ ಕೆಮ್ಮಡೆ ಮೊದಲಾದವರು ಉಪಸ್ಥಿತರಿದ್ದರು.
Next Story





