ಜ.22ರಂದು ರಾಜ್ಯ ಮಟ್ಟದ ವಿಧಾನ ಸೌಧ ಚಲೋ

ಉಡುಪಿ, ಜ.20: ದಲಿತರಿಗೆ ಭೂಮಿ, ವಸತಿ, ನೀರು(ಗಂಗಾ ಕಲ್ಯಾಣ), ಉದ್ಯೋಗ ಆದ್ಯತಾ ವಲಯ ಗುರುತಿಸಿ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಈ ಕುರಿತು ವಿಧಾನ ಸಭೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ರಾಜ್ಯ ಮಟ್ಟದ ವಿಧಾನ ಸೌಧ ಚಲೋ ಕಾರ್ಯಕ್ರಮವನ್ನು ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಜ.22ರಂದು ಹಮ್ಮಿಕೊಳ್ಳಲಾಗಿದೆ.
ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ವಿಶೇಷ ಜಿಲ್ಲಾ ತ್ವರಿತ ನ್ಯಾಯಲಯ ಸ್ಥಾಪಿಸಬೇಕು. ಗಂಗಾವತಿ ಮರುಕುಂಬಿ ದಲಿತರಿಗೆ ಮತ್ತು ತುಮಕೂರು ಗೋಪಾಲಪುರದ ದಲಿತರಿಗೆ ಸರ್ಕಾರ ಪರಿಹಾರ ನೀಡಬೇಕು. ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಸಮಗ್ರ ಸರ್ವೇ ಮಾಡಬೇಕು ಎಂದು ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





