ಜೂ.22: ಕವನ ಸಂಕಲನ ಲೋಕಾರ್ಪಣೆ

ಉಡುಪಿ, ಜೂ.17: ಸಾಹಿತಿ ಬಾಸುಮ ಕೊಡಗು ಅವರ ನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆ ಜೂ.22ರಂದು ಸಂಜೆ 4.30ಕ್ಕೆ ಉಡುಪಿಯ ಮಥುರಾ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಲಿದೆ.
ವ್ಯೆದ್ಯರೂ, ಸಾಹಿತಿಗಳೂ ಆಗಿರುವ ಡಾ.ಭಾಸ್ಕರಾನಂದ ಕುಮಾರ್ ಕೃತಿ ಬಿಡುಗಡೆ ಮಾಡಲಿರುವರು. ಅಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ವಹಿಸಲಿರುವರು. ಡಾ.ನಿಕೇತನ ಕೃತಿಪರಿಚಯ ಮಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





