ಜು.23ರಂದು ಪತ್ರಿಕಾ ದಿನಾಚರಣೆ, ಡೈರಕ್ಟರಿ ಬಿಡುಗಡೆ
ಕುಂದಾಪುರ, ಜು.21: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಅಧಿಕೃತ ಸದಸ್ಯರ ಡೈರಕ್ಟರಿ ಬಿಡುಗಡೆ ಸಮಾರಂಭವು ಜು.23ರಂದು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್‌ನಲ್ಲಿ ಜರಗಲಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಕಾರ್ಯಕ್ರಮ ಉದ್ಘಾಟಸಲಿರುವರು. ಪತ್ರಿಕಾ ದಿನಾಚರಣೆ ಕುರಿತು ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ ವಿಶೇಷ ಉಪನ್ಯಾಸ ನೀಡಲಿರುವರು. ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಯು.ಎಸ್.ಶೆಣೈ ಮತ್ತು ಡಾ.ಉದಯ ಕುಮಾರ್ ತಲ್ಲೂರು ಇವರಿಗೆ ಪತ್ರಿಕೋದ್ಯಮದ ಗೌರವಾರ್ಪಣೆ ಸಲ್ಲಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.
Next Story





