ಸೆ.23: ಘನತ್ಯಾಜ್ಯ ಸಂಗ್ರಹ ಸ್ಥಗಿತ

ಮಂಗಳೂರು, ಸೆ.22: ರಾಜ್ಯ ಸರಕಾರದ ಆದೇಶದಂತೆ ಸೆ.23ರಂದು ನಡೆಯುವ ಪೌರ ಕಾರ್ಮಿಕ ದಿನಾಚರಣೆಯ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹ ಸ್ಥಗಿತಗೊಳಿಸಲಾಗುವುದು ಎಂದು ಪೌರ ಕಾರ್ಮಿಕರ ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಖಾಯಂ ಮತ್ತು ನೇರಪಾವತಿ ಪೌರ ಕಾರ್ಮಿಕರಿಗೆ ಘನ ತ್ಯಾಜ್ಯ ಸಂಗ್ರ ಹಣಾ ವಾಹನದ ಡ್ರೈವರ್ ಮತ್ತು ಲೋಡರ್ಸ್‌ಗಳಿಗೆ ರಜೆಯನ್ನು ನೀಡಲಾಗಿದೆ. ಪುರಭವನದಲ್ಲಿ ನಿವೃತ್ತಿ ಹೊಂದಿದ ಪೌರ ಕಾರ್ಮಿಕರಿಗೆ ಹಾಗೂ ಉತ್ತಮ ಅಂಕಗಳಿಸಿದ ಪೌರ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Next Story





