ಜ.24ರಂದು ಅಂಚೆ ಜನ ಸಂಪರ್ಕ ಅಭಿಯಾನ
ಉಡುಪಿ: ಅಲೆವೂರು ನೆಹರೂ ಸ್ಪೋರ್ಟ್ಸ್ ಕಲ್ಟರಲ್ ಅಸೋಸಿಯೇಶನ್ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ವನ್ನು ಜ.24ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆಯವರೆಗೆ ಅಲೆವೂರು ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಭಿಯಾನದಲ್ಲಿ ಹೊಸ ಆಧಾರ್ ನೊಂದಣಿ, ಬಯೋಮೆಟ್ರಿಕ್ ಪರಿಷ್ಕರಣೆ, ವಿಳಾಸ ಹಾಗು ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡಿಕೊಡಲಾಗುದು. ವಿವಿಧ ಅಂಚೆ ಸೇವೆಗಳ ಮಾಹಿತಿ ಕಾರ್ಯಗಾರ ಕೂಡ ನಡೆಯಲಿದೆ ಎಂದು ನೆಹರು ಸ್ಪೋರ್ಟ್ಸ್ ಅಧ್ಯಕ್ಷ ದಯಾನಂದ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ್ಪೆ ಬಂದರು ಮೀನುಗಾರಿಕೆ ಸಚಿವರ ಭೇಟಿಗೆ ಮನವಿ
ಮಲ್ಪೆಮೀನುಗಾರಿಕಾ ಬಂದರಿನ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸಲು ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮೀನುಗಾರಿಕೆ ಹಾಗೂ ಬಂದರು ಸಚಿವ ಮಾಂಕಾಳ ವೈದ್ಯ ಅವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಸುಮಾರು 7 ತಿಂಗಳು ಕಳೆದರೂ ಸಚಿವರೂ ಈವರೆಗೆ ಮಲ್ಪೆಗೆ ಭೇಟಿ ನೀಡಿಲ್ಲ ಹಾಗೂ ಯಾವುದೇ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸಿಲ್ಲ. ಮಲ್ಪೆಮೀನುಗಾರ ಸಂಘದ ನೇತೃತ್ವದಲ್ಲಿ ನಡೆದ ಹಲವು ಸಭೆಯ ಲ್ಲಿಯೂ ಈ ಬಗ್ಗೆ ಮೀನುಗಾರ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದ್ದು, ಸಚಿವರು ಅತೀ ಶೀಘ್ರದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿ, ಮುಂಬರುವ ಬಜೆಟ್‌ನಲ್ಲಿ ಮಲ್ಪೆಬಂದರಿನ ಅಭಿವೃಧ್ದಿ ಕಾರ್ಯಗಳಿಗೆ ಅನುದಾನ ಒದಗಿಸು ವಂತೆ ಮನವಿ ಮಾಡಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







