ಜ.24ರಂದು ಎಂ.ಜಾನಕಿ ಬ್ರಹ್ಮಾವರ ತುಳು ಕಾದಂಬರಿಯ ಇಂಗ್ಲೀಷ್ ಅನುವಾದ ‘ದಿ ಬ್ಲ್ಯಾಕ್ ಈಗಲ್’ ಬಿಡುಗಡೆ

ಉಡುಪಿ, ಜ.23: ತುಳು ಲೇಖಕಿ, ಕಾದಂಬರಿಕಾರ್ತಿ, ಎಂ. ಜಾನಕಿ ಬ್ರಹ್ಮಾವರ ಇವರ ತುಳು ಕಾದಂಬರಿ ‘ಕಪ್ಪು ಗಿಡಿ’ ಇದರ ಇಂಗ್ಲೀಷ್ ಅವತರಣಿಕೆ ‘ದಿ ಬ್ಲ್ಯಾಕ್ ಈಗಲ್’ನ ಬಿಡುಗಡೆ ಸಮಾರಂಭ ನಾಳೆ ಜ.24ರಂದು ಸಂಜೆ 4 ಗಂಟೆಗೆ ಹೊಟೇಲ್ ಕಿದಿಯೂರಿನಲ್ಲಿ ನಡೆಯಲಿದೆ.
ಗೋವಾದ ಎಸ್.ಎನ್.ಡಿ.ಪೂಜಾರಿ ಅವರು ಕಪ್ಪು ಗಿಡಿಯನ್ನು ಇಂಗ್ಲೀಷ್‌ಗೆ ಅನುವಾದಿಸಿದ್ದಾರೆ. ಕೃತಿಯನ್ನು ಬಿಡುಗಡೆ ಗೊಳಿಸುವ ಖ್ಯಾತ ವಿಮರ್ಶಕ, ಲೇಖಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಇವರು ಕೃತಿಯನ್ನು ಪರಿಚಯಿಸಲಿದ್ದಾರೆ.
ಉಡುಪಿ ಜಿಲ್ಲಾ ಕಸಾಪದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಕಲ್ಲಚ್ಚು ಪ್ರಕಾಶನದ ಪ್ರಕಾಶಕ ಮಹೇಶ್ ಆರ್.ನಾಯಕ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





