ಆ.24: ಯುನಿಟಿ ಸೌಹಾರ್ದ ಕೋ.ಲಿ. ಕುಂದಾಪುರ ಶಾಖೆ ಉದ್ಘಾಟನೆ
ಕುಂದಾಪುರ, ಆ.22: ಯುನಿಟಿ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಇದರ ಕುಂದಾಪುರ ಶಾಖೆಯು ಆ.24ರಂದು ಬೆಳಗ್ಗೆ 10ಗಂಟೆಗೆ ಕುಂದಾಪುರ ಮುಖ್ಯ ರಸ್ತೆಯ ಸಾಯಿ ಸೆಂಟರಿನ ಮೊದಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ರಾಜ್ಯ ಸೌಹಾರ್ದ ಫೆಡರಲ್ ಕೊ-ಅಪರೇಟಿವ್ ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ ಉದ್ಘಾಟಿಸಲಿರುವರು. ಯುನಿಟಿ ಸೌಹಾರ್ದದ ಅಧ್ಯಕ್ಷ ಜಮಾಲ್ ಹೈದರ್ ಅಧ್ಯಕ್ಷತೆ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





