ಸೆ.25ರಿಂದ 27ರವರೆಗೆ ಮಕ್ಕಳ ಕಣ್ಣಿನ ತಪಾಸಣೆ ಶಿಬಿರ

ಉಡುಪಿ, ಸೆ.23: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ವತಿಯಿಂದ 18 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಸೆ.25ರಿಂದ 27ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಹಮ್ಮಿಕೊಂಡಿದೆ.
ಆಗಾಗ್ಗೆ ತಲೆನೋವು ಇರುವ ಮಕ್ಕಳು, ಅತಿಯಾದ ಮೊಬೈಲ್ ಫೋನ್, ಕಂಪ್ಯೂಟರ್ ಬಳಸುವ ಮಕ್ಕಳು, ಟಿವಿಯ ತೀರಾ ಹತ್ತಿರ ಕುಳಿತುಕೊಳ್ಳುವ ವರು, ಪುಸ್ತಕಗಳನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡು ಓದುವ ಮಕ್ಕಳು, ಕಣ್ಣು ಮಿಟುಕಿಸುವ ಮಕ್ಕಳು, ತಲೆ ಎತ್ತುವ ಅಥವಾ ಆಗಾಗ್ಗೆ ಕಣ್ಣು ಉಜ್ಜುವ ಮಕ್ಕಳು, ಕೌಟುಂಬಿಕವಾಗಿ ಕನ್ನಡಕ ಮತ್ತು ಕಣ್ಣಿನಲ್ಲಿ ದೋಷ ಹೊಂದಿರುವ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್- 7338343777 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





