ನ.26ರಂದು ‘ಇತ್ತಿಬಾ ಎ ಸುನ್ನತ್’ ಧಾರ್ಮಿಕ ಸಮ್ಮೇಳನ
ಉಡುಪಿ, ನ.25: ಜಮೀಯತೆ ಅಹ್ಲೆ ಹದೀಸ್ ಕರ್ನಾಟಕ ಮತ್ತು ಗೋವಾ ಇದರ ಮಾರ್ಗದರ್ಶನದಲ್ಲಿ ಮರ್ಕಝ್ ಹಫೀಝ್ ಇಬ್ನೆಹಜರ್ ಅಸ್ಕಲಾನಿ ಭಟ್ಕಳ ವತಿಯಿಂದ ಇತ್ತಿಬಾ ಎ ಸುನ್ನತ್ ಎಂಬ ಏಕದಿನ ಧಾರ್ಮಿಕ ಸಮ್ಮೇಳನವನ್ನು ಭಟ್ಕಳದ ನವಾಯತ್ ಕಾಲನಿಯ ಆಮೀನಾ ಪ್ಯಾಲೇಸ್‌ನಲ್ಲಿ ನ.26ರಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 6.30ರವರೆಗೆ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಜಮೀಯತೆ ಅಹ್ಲೆ ಹದೀಸ್ ಹಿಂದ್ ಇದರ ರಾಷ್ಟ್ರಿಯ ಅಧ್ಯಕ್ಷ ಹಾಗೂ ಅಖಿಲ ಭಾರತ ಮುಸ್ಲಿಮ್ ಪರ್ಸನ್ ಲಾ ಬೋರ್ಡ್ ಸದಸ್ಯ ಶೇಕ್ ಅಸ್ಗರ್ ಅಲಿ ಇಮಾಮ್ ಮೆಹದಿ ಸಲಫಿ ಮದನಿ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಜಮೀಯತೆ ಅಹ್ಲೆ ಹದೀಸ್ ಕರ್ನಾಟಕ ಮತ್ತು ಗೋವಾ ಅಧ್ಯಕ್ಷ ಶೇಕ್ ಅಬ್ದುಲ್ ವಹಾಬ್ ಜಾಮಈ ಹಾಗೂ ಕಾರ್ಯದರ್ಶಿ ಅಸ್ಲಮ್ ಖಾನ್ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





