ಸೆ.26ರಂದು ಶನಿಗ್ರಹ ವೀಕ್ಷಣೆಗೆ ಅವಕಾಶ

ಉಡುಪಿ, ಸೆ.25: ಸೌರಮಂಡಲದ ಅತ್ಯಂತ ಸುಂದರವಾದ ಗ್ರಹವೆನಿಸಿದ ಶನಿಗ್ರಹ ಸೆ.26ರ ಸಂಜೆ 7ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಆಕಾಶದಲ್ಲಿ ಪೂರ್ವ ದಿಕ್ಕಿನಲ್ಲಿ ಹುಣ್ಣಿಮೆಯ ಚಂದ್ರನ ಜೊತೆಗೆ ಬಹಳ ಹತ್ತಿರದಲ್ಲಿ ಗೋಚರಿಸಲಿದೆ.
ವಿಶ್ವ ಮಾನ್ಯತೆ ಪಡೆದ ಆವಿಷ್ಕರಿಸಿದ ಎರಡು ಕಣ್ಣಿನ ಬೈನಾಕುಲಾರ್ ಮತ್ತು ದೂರದರ್ಶಕದ ಮೂಲಕ ಆರ್.ಮನೋಹರ್ ಖಗೋಳ ಆಸಕ್ತರಿಗೆ ಹುಣ್ಣಿಮೆಯ ಚಂದ್ರ ಮತ್ತು ಶನಿಗ್ರಹ ನೋಡುವ ಅವಕಾಶವನ್ನು ಉಡುಪಿಯ ಮಾರುತಿ ವಿಥೀಕಾದಲ್ಲಿರುವ(ಸಂಸ್ಕೃತ ಕಾಲೇಜಿನ ಬಳಿ) ಶ್ಯಾಮ್ ಕಾಂಪ್ಲೆಕ್ಸ್‌ನ ಭವಾನಿ ಲಾಡ್ಜಿನ ಮೂರನೇ ಮಹಡಿ ಮೇಲೆ ಕಲ್ಪಿಸಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.
Next Story




