ಜೂ.26ರಂದು 73 ಕೆಜಿ ಮಾದಕದ್ರವ್ಯ ಪದಾರ್ಥ ನಾಶ

ಸಾಂದರ್ಭಿಕ ಚಿತ್ರ
ಉಡುಪಿ: ರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯ ಪದಾರ್ಥಗಳನ್ನು ನಾಶಪಡಿಸಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಉದ್ದೇಶಿಸಿದೆ.
ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯ ಪದಾರ್ಥಗಳನ್ನು ನ್ಯಾಯಾಲಯದ ಆದೇಶದ ಅನುಸಾರ ಜೂ.26ರಂದು ಬೆಳಿಗ್ಗೆ 10 ಗಂಟೆಗೆ ಪಡುಬಿದ್ರಿ ಠಾಣಾ ಸರಹದ್ದಿನ ಆಯುಷ್ ಎನ್ವಿರೋಟೆಕ್ ಪ್ರೈವೆಟ್ ಲಿಮಿಟೆಡ್ ನಂದಿಕೂರು ಕೈಗಾರಿಕಾ ವಲಯದಲ್ಲಿ ನಾಶಪಡಿಸಲು ತೀರ್ಮಾನಿಸಲಾಗಿದೆ.
ನಾಶಪಡಿಸಲು ಸಿದ್ಧವಿರುವ 73 ಕೆಜಿ 092 ಗ್ರಾಂ 828 ಮಿಲಿ ಗ್ರಾಂ ತೂಕದ ಗಾಂಜಾದ ಅಂದಾಜು ಮೌಲ್ಯ 36,29,550ರೂ. ಆಗಿದೆ. ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಉಡುಪಿ ಜಿಲ್ಲೆ, ಕಮಿಟಿಯ ಸದಸ್ಯರಾದ ಉಡುಪಿ ಪೊಲೀಸ್ ಉಪ ವಿಭಾಗಾಧಿಕಾರಿ ಹಾಗೂ ಕಾರ್ಕಳ ಪೊಲೀಸ್ ಉಪ ವಿಭಾಗಾಧಿಕಾರಿಯವರು ಭಾಗವಹಿಸಲಿದ್ದಾರೆ.
Next Story




