ಜೂ.27: ಕೋಟದಲ್ಲಿ ನಿಧಿ ಆಪ್ಕೆ ನಿಕಟ್
ಉಡುಪಿ, ಜೂ.21: ನಿಧಿ ಅಪ್ಕೆ ನಿಕಟ್/ಭವಿಷ್ಯನಿಧಿ ನಿಮ್ಮ ಹತ್ತಿರ ಎಂಬ ಕಾರ್ಯಕ್ರಮ ಭವಿಷ್ಯ ನಿಧಿ ಸದಸ್ಯರ ಮತ್ತು ಪಿಂಚಣಿದಾರರ ಕುಂದುಕೊರತೆ ಗಳನ್ನು ಪರಿಹರಿಸಲು ಮತ್ತು ಜಾಗೃತಿ ಮೂಡಿಸಲು ಭವಿಷ್ಯ ನಿಧಿ ಸಂಘಟನೆಯ ಪ್ರಧಾನ ಕಛೇರಿ ಹೊಸದಿಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಮಾಸಿಕ ಕಾರ್ಯಕ್ರಮವಾಗಿದೆ. ಅದರಂತೆ ಜೂನ್ ತಿಂಗಳ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಜೂ.27ರಂದು ಬೆಳಗ್ಗೆ 11 ಗಂಟೆಯಿಂದ ಕೋಟದಲ್ಲಿರುವ ‘ಜನತಾ ಫಿಶ್‌ಮಿಲ್ ಆ್ಯಂಡ್ ಆಯಿಲ್ ಪ್ರಾಡಕ್ಟ್’ ಇಲ್ಲಿ ಇಲ್ಲಿ ನಡೆಯಲಿದೆ.
ನಿಧಿ ಅಪ್ಕೆ ನಿಕಟ್ ಎಂಬುದು ತನ್ನ ಲಕ್ಷಾಂತರ ಚಂದಾದಾರರಿಗೆ ತನ್ನ ವಿವಿಧ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭವಿಷ್ಯ ನಿಧಿ ಸಂಸ್ಥೆಯ ಪ್ರಯತ್ನವಾಗಿದ್ದು, ಕಾರ್ಯಕ್ರಮದ ಪ್ರಾಥಮಿಕ ಗಮನವು ಜಿಲ್ಲೆಯನ್ನು ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ. ಇದು ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಸಹಭಾಗಿತ್ವದ ಅರಿವು ಮೂಡಿಸುವ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಸದಸ್ಯರ ಕುಂದುಕೊರತೆ ಗಳಿಗೆ ಪರಿಹಾರ ಮತ್ತು ಮಾಹಿತಿ ವಿನಿಮಯ ನಡೆಯಲಿದೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಪಿಎಫ್ ಚಂದಾದಾರರು, ಇಪಿಎಸ್ ಪಿಂಚಣಿದಾರರು, ಪಿಎಫ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಉದ್ಯೋಗದಾತರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ಸದಸ್ಯರು ಈ ಕಾರ್ಯಕ್ರಮ ದಲ್ಲಿ ಹಾಜರಾಗಲು ಹಾಗೂ ಇದರ ಪ್ರಯೋಜನ ಪಡೆದು ಕೊಳ್ಳಲು ಉಡುಪಿ ಪ್ರಾದೇಶಿಕ ಕಾರ್ಯಾಲಯದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.







