ಜ.28ರಂದು ಕ್ಯಾನ್ಸರ್ -ಟೆಲಿಮೆಡಿಸಿನ್ ಕೇಂದ್ರದ ಉದ್ಘಾಟನೆ
ಉಡುಪಿ: ಮಂಗಳೂರು ಜುಲೇಖಾ ಯೆನೆಪೋಯ ಇನ್ಸಿಟಿಟ್ಯೂಟ್ ಆಫ್ ಒಂಕೋಲಜಿ ಮತ್ತು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಜಂಟಿ ಆಶ್ರಯ ದಲ್ಲಿ ಕ್ಯಾನ್ಸರ್ ಮತ್ತು ಟೆಲಿಮೆಡಿಸಿನ್ ಕೇಂದ್ರದ ಉದ್ಘಾಟನೆಯು ಜ.28ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೇಖಾ ಯೆನೆಪೋಯ ಇನ್ಸಿಟಿಟ್ಯೂಟ್ ಆಫ್ ಒಂಕೋಲಜಿಯ ಕ್ಯಾನ್ಸರ್ ಚಿಕಿತ್ಸಾ ತಜ್ಞ ವೈದ್ಯರುಗಳಿಂದ ಪ್ರತಿ ಶನಿವಾರ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳ ಸಮಗ್ರ ತಪಾಸಣೆ ನಡೆಯಲಿದೆ. ಕೇಂದ್ರವನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿ ರುವರು. ಅಧ್ಯಕ್ಷತೆಯನ್ನು ಯೆನಪೋಯ ವಿವಿ ಉಪಕುಲಪತಿ ಡಾ.ವಿಜಯ್ ಕುಮಾರ್ ವಹಿಸಿದ್ದರು ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಇದರಲ್ಲಿ ಬಾಯಿಯ ಪರೀಕ್ಷೆ, ಮ್ಯಾಮೋಗ್ರಾಮ್, ಪ್ಯಾಪ್ ಸ್ಮಿಯರ್, ಶುಗರ್ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಅನೀಮಿಯ ಪರೀಕ್ಷೆ ನಡೆಸಲಾಗುವುದು. ಅದೇ ರೀತಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆರೋಗ್ಯ ಕಾರ್ಡ್ ನೋಂದಾವಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಉಪ ಪ್ರಬಂಧಕ ಸೆಲ್ವಿನ್ ನೆಲ್ಸನ್, ಜುಲೇಖಾ ಯೆನೆ ಯದ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಬೋನಿ ಪೌಲ್, ಚಿನ್ಮಯಿ ಆಸ್ಪತ್ರೆಯ ಪ್ರಬಂಧಕ ಪ್ರದೀಪ್ ಉಪಸ್ಥಿತರಿದ್ದರು.







