ಫೆ.28ರಂದು ಪಟ್ಲದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಉಡುಪಿ: ನೊಬೆಲ್ ಪ್ರಶಸ್ತಿ ಪಡೆದ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಸಾಧನೆಯ ನೆನಪಿನಲ್ಲಿ ಪ್ರತಿ ಫೆ.28ರಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ವಿಜ್ಞಾನ ದಿನವನ್ನು ಉಡುಪಿ ತಾಲೂಕು ಪಟ್ಲ ಹೈಸ್ಕೂಲ್‌ನಲ್ಲಿ ಆಚರಿಸಲಾಗುತ್ತಿದೆ.
ಹೋಬಳಿ ಮಟ್ಟದ 8 ಶಾಲೆಗಳನ್ನು ಒಳಗೊಂಡ ಈ ಆಚರಣೆಯಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುವಲ್ಲಿ ಹಾಗೂ ಮಕ್ಕಳೇ ತಯಾರಿಸಿದ ವಿಜ್ಞಾನಕ್ಕೆ ಸಂಬಂಧಪಟ್ಟ ಮೋಡಲ್‌ಗಳ ಪ್ರಾತ್ಯಕ್ಷಿಕೆ ಪಟ್ಲ ಶಾಲೆಯಲ್ಲಿ ಜರಗಲಿದೆ ಎಂದು ಶಿಕ್ಷಕ ಸ್ವದೇಶ್ ಶೆಟ್ಟಿ ಹಿರಿಯಡ್ಕ ತಿಳಿಸಿದ್ದಾರೆ.
Next Story





