ಅ.28ರಂದು ವಿದ್ಯುತ್ ಕಡಿತ ವಿರುದ್ಧ ಪಂಜಿನ ಮೆರವಣಿಗೆ

ಉಡುಪಿ, ಅ.26: ಪಂಚಾಯತ್ ತಾಲೂಕು ಪಂಚಾಯತ್ ಮುಂತಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಲ ವಾರು ವರ್ಷಗಳಿಂದ ಬಾಕಿ ಯಾಗಿದ್ದು ಆಡಳಿತ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದೆ. ಜನಸಾಮಾನ್ಯರು ಆಡಳಿತಾ ತ್ಮಕ ವ್ಯವಸ್ಥೆಗೆ ರೋಸಿ ಹೋಗಿದ್ದಾರೆ. ನಿಕಟಪೂರ್ವ ಜನಪ್ರತಿನಿಧಿ ಗಳು ಮತ್ತು ವಾರ್ಡಿಗೆ ಸಂಬಂಧಪಟ್ಟ ಪಕ್ಷದ ಪ್ರಮುಖರು ಜನಸಾಮಾನ್ಯರ ಜೊತೆ ನಿಕಟ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನಿರಂತರ ಶ್ರಮ ವಹಿಸಬೇಕೆಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮದ ನಿರಂತರ ವಿದ್ಯುತ್ ಕಡಿತ ಮತ್ತು ಲೋ ವೋಲ್ಟೇಜ್ ವಿರುದ್ಧ ಅ.28ರಂದು ನಡೆಯಲಿರುವ ಪಂಜಿನ ಮೆರವಣಿಗೆ ಅಭಿಯಾನದ ಕುರಿತು ಉಡುಪಿ ನಗರ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ವಹಿಸಿದ್ದರು. ಸಭೆಯಲ್ಲಿ ನಿಕಟಪೂರ್ವ ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉಪಸ್ಥಿತರಿದ್ದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ ಸ್ವಾಗತಿಸಿದರು. ಜಗದೀಶ್ ಆಚಾರ್ಯ ವಂದಿಸಿದರು.




