ಡಿ.3: ಕಾರ್ಕಳ ತಾಲೂಕು ಕನ್ನಡ ಸಮ್ಮೇಳನ

ಉಡುಪಿ, ಡಿ.1: 90 ವರ್ಷ ಪ್ರಾಯದ ಹಿರಿಯ ಸಾಹಿತಿಗಳಾದ ಸೂಡ ಸದಾನಂದ ಶೆಣೈ ಇವರ ಅಧ್ಯಕ್ಷತೆಯಲ್ಲಿ 19ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ.3ರ ರವಿವಾರ ಕಾರ್ಕಳ ತಾಲೂಕು ಗಣಿತ ನಗರದ ಜ್ಞಾನಸುಧಾ ಸಭಾಂಗಣದಲ್ಲಿ ನಡೆಯಲಿದೆ.
ಸಮ್ಮೇಳನವನ್ನು ಬೆಳಗ್ಗೆ 10ಗಂಟೆಗೆ ಕಾರ್ಕಳದ ಹಿರಿಯ ಉದ್ಯಮಿಗಳಾದ ಬೋಳ ಪ್ರಭಾಕರ ಕಾಮತ್ ಅವರು ಉದ್ಘಾಟಿ ಸುವರು. ಶಾಸಕ ಸುನಿಲ್ ಕುಮಾರ್ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಡಾ.ಸುಧಾಕರ ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸುವರು.
ಬಳಿಕ ವಿದ್ಯಾರ್ಥಿ ಗೋಷ್ಠಿಯೂ ಸೇರಿದಂತೆ ಮೂರು ಗೋಷ್ಠಿಗಳು ನಡೆಯಲಿವೆ. ಕನ್ನಡದಲ್ಲಿ ದಾಖಲೆಯ 19 ಮಹಾಕಾವ್ಯ ಗಳನ್ನು ಬರೆದ ಹಿರಿಯ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರು ದಿಕ್ಸೂಚಿ ಉಪನ್ಯಾಸ ನೀಡಲಿರುವರು.
ಸಂಜೆ 3:30ಕ್ಕೆ ಸಮಾರೋಪ ಸಮಾರಂಭ ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವೂ ನಡೆಯಲಿದೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.
Next Story





