ಸೆ.3ಕ್ಕೆ ಶ್ರೀಬ್ರಹ್ಮಾನಂದ ಸರಸ್ವತಿ ಪಟ್ಟಾಭಿಷೇಕ ವರ್ಧಂತಿ ಉತ್ಸವ
ಉಡುಪಿ, ಆ.29: ಧರ್ಮಸ್ಥಳ ಸಮೀಪದ ಶ್ರೀರಾಮ ಕ್ಷೇತ್ರದ ಮಹಾ ಮಂಡಲೇಶ್ವರ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ಸೆ.3ರಂದು ಶ್ರೀರಾಮಕ್ಷೇತ್ರ ಮಹಾ ಸಂಸ್ಥಾನದಲ್ಲಿ ನಡೆಯಲಿದೆ ಎಂದು ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಉಡುಪಿ ರಾಮ ಸಮಿತಿಯ ಎಜುಕೇಶನಲ್ ಟ್ರಸ್ಟ್‌ನ ಗೌರವಾಧ್ಯಕ್ಷ ರಾದ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಟ್ಟಾಭಿಷೇಕ ವರ್ಧಂತಿ ಉತ್ಸವದಲ್ಲಿ ಶ್ರೀಗಳ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಒಬೂ ಪೂಜಾರಿ ಮಾತನಾಡಿ, ಶ್ರೀರಾಮ ಕ್ಷೇತ್ರದ ನಿರ್ಮಾತೃ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಸಂಕಲ್ಪದಂತೆ ಸದ್ಗುರು ಬ್ರಹ್ಮಾನಂದ ಸರಸ್ವತಿ ಅವರು ವಿವಿಧ ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.
ಗುರುಗಳು ಇತ್ತೀಚೆಗೆ ದಕ್ಷಿಣ ಭಾರತದ ಏಕೈಕ ಮಹಾಮಂಡಲೇಶ್ವರ ಪದವಿ ಪಡೆದಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆ ಕುಮಟಾದ ಕೋನಳ್ಳಿ ವನದುರ್ಗಾ ದೇವಸ್ಥಾನದಲ್ಲಿ ಚಾರ್ತುಮಾಸ್ಯ ವ್ರತಾಚರಣೆ ಕೈಗೊಂಡಿದ್ದಾರೆ ಎಂದರು.
ಸೆ.3ರಂದು ನಡೆಯುವ ಪಟ್ಟಾಭಿಷೇಕದ 17ನೇ ವರ್ಧತ್ಯುತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಶಾಸಕರು, ಸಂಸದರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಬಿ. ಎಸ್. ನಾರಾಯಣ್, ರಘುನಾಥ್ ಮಾಬಿಯಾನ್ ಉಪಸ್ಥಿತರಿದ್ದರು.







