ಅ.3: ಉದ್ಯಮಿ ಡಾ. ಬಿ.ಕೆ.ಮೋದಿಗೆ ಸನ್ಮಾನ

ಉಎಡುಪಿ, ಅ.1: ಅಮೆರಿಕದ ಸಂಘಟನೆಯೊಂದರಿಂದ ‘ವಿಶ್ವಗುರು ಪ್ರಶಸ್ತಿ’ಗೆ ಭಾಜನರಾಗಿರುವ ಭಾರತೀಯ ಮೂಲದ ಖ್ಯಾತ ಉದ್ಯಮಿ ಡಾ.ಬಿ.ಕೆ.ಮೋದಿ ಅವರನ್ನು ಇದೇ ಅ.3ರಂದು ಉಡುಪಿಯ ದಂಡತೀರ್ಥ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಸೀತಾರಾಮ್ ಭಟ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಕಿನ್ನಿಮುಲ್ಕಿಯ ಶ್ರೀದೇವಿ ಸಭಾಭವನದಲ್ಲಿ ಭೆಗ್ಗೆ 9:30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಸಂಘಟನೆಗಳ ಜೊತೆ ಡಾ.ಮೋದಿ ಅವರು ಸಂವಾದವನ್ನು ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಸ್ರೀಕಾಂತ ಉಪಾದ್ಯಾಯ, ಪ್ರದೀಪ್ ನಂಬಿಯಾರ್, ಕಮಲಾಪತಿ ಕಶ್ಯಪ್ ಹಾಗೂ ರಮೇಶ್ ಅವರು ಉಪಸ್ಥಿತರಿದ್ದರು.
Next Story




