ಅ.31: ತೊಟ್ಟಂ ಚರ್ಚಿನಲ್ಲಿ ಕೊಂಕಣಿ ಜಾನಪದ ಹಾಡು ಮತ್ತು ವಾದ್ಯಗಳ ತರಬೇತಿ ಕಾರ್ಯಾಗಾರ

ಉಡುಪಿ, ಅ.28: ಉಡುಪಿ ಧರ್ಮಪ್ರಾಂತದ ಯುವ ಕಥೊಲಿಕ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರವನ್ನು ಅ.31ರಂದು ಬೆಳಗ್ಗೆ 9ರಿಂದ ಸಂಜೆ 4:30ರವರೆಗೆ ಚರ್ಚಿನ ಸಭಾಂಗಣದಲ್ಲಿ ಆಯೋಜಿ ಸಲಾಗಿದೆ.
ಕಾರ್ಯಾಗಾರವನ್ನು ಕೊಂಕಣ್ ಮೈನಾ ಎಂದೇ ಖ್ಯಾತರಾದ ಹೆಸರಾಂತ ಗಾಯಕ ದಿ.ವಿಲ್ಫೀ ರೆಬಿಂಬಸ್ ಅವರ ಪತ್ನಿ ಮೀನಾ ರೆಬಿಂಬಸ್ ಉದ್ಘಾಟಿಸಲಿದ್ದು, ತೊಟ್ಟಂ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಭಾಗವಹಿಸಲಿದ್ದಾರೆ.
ಯುವ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಪಡೆಯಲು ಇರುವ ಅತ್ಯುತ್ತಮ ಅವಕಾಶ ಇದಾಗಿದ್ದು ಧರ್ಮಪ್ರಾಂತದ ಯುವಜನರು ಇದರ ಪ್ರಯೋಜನ ಪಡೆಯುವಂತೆ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





