4 ಕೋಟಿ ರೂ. ವೆಚ್ಚದ ಕಿದಿಯೂರು -ಸಂಪಿಗೆ ನಗರ ಮುಖ್ಯರಸ್ತೆ ಉದ್ಘಾಟನೆ

ಉಡುಪಿ, ಮೇ 18: ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲಪಾಡಿ, ಕಡೆಕಾರು, ಉದ್ಯಾವರ ಗ್ರಾಮವನ್ನು ಸಂಪರ್ಕಿಸುವ ಬಂಕೇರಕಟ್ಟ ಸೇತುವೆಯಿಂದ ಸಂಪಿಗೆ ನಗರದ ವರೆಗಿನ ಸುಮಾರು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಮುಖ್ಯ ರಸ್ತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.
ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉದ್ಯಾವರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಮಲ್ಪೆಯನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ದಿನಂಪ್ರತಿ ಸಂಚರಿಸುವ ಸಾವಿರಾರು ಜನರಿಗೆ ಇದರಿಂದ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಇತರ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ವೆಂಕಟರಮಣ ಕಿದಿಯೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಗಿರೀಶ್ ಅಮೀನ್, ಅಶೋಕ್ ಪಾಲನ್, ಪ್ರಶಾಂತ್ ಸಾಲ್ಯಾನ್, ಜಯಕರ ಸನಿಲ್, ರಾಜೇಂದ್ರ ಪಂದು ಬೆಟ್ಟು, ರಘುನಾಥ್ ಕೋಟ್ಯಾನ್, ಪ್ರದೀಪ್ ಚಂದ್ರ ಗಾಣಿಗ, ಪ್ರಮೋದ್ ಸಾಲ್ಯಾನ್, ಸುನೀಲ್ ಕಪ್ಪೆಟ್ಟು, ಸೋಮನಾಥ ಬಿ.ಕೆ., ರಾಜೇಶ್ ಸುವರ್ಣ, ಹರೀಶ್ ಪಾಲನ್, ಸುಂದರ ಪೂಜಾರಿ, ಶಶಿಧರ ಸುವರ್ಣ, ವಿನೋದಿನಿ, ಮಾಲತಿ, ವಿದ್ಯಾ, ದೀಪಾ,ಅರುಣ್, ದೀಪಕ್ ಪುತ್ರನ್, ರಾಕೇಶ ಜತ್ತನ್, ಕಿಶೋರ್ ಕುಮಾರ್, ಹರೀಶ್ ಸುವರ್ಣ, ರಮೇಶ್ ಆಚಾರ್ಯ,ಕಿರಣ್, ಗೌತಮ್, ವಿಕಾಸ್, ವಿಜಯ ಭಟ್ ಮೊದಲಾದವರು ಉಪಸ್ಥಿತರಿದ್ದರು.






