527 ಶ್ರೀತಾಳೆ ಬೀಜ ನೆಟ್ಟು ಹುತಾತ್ಮ ಯೋಧರಿಗೆ ಗೌರವ

ಮಣಿಪಾಲ, ಜು.31: ಮಣಿಪಾಲ ಎಂಐಟಿ ಆವರಣದಲ್ಲಿ ಕಾರ್ಗಿಲ್ ದಿಗ್ವಿಜಯ ದಿವಸ ಪ್ರಯುಕ್ತ ವಿನಾಶದಂಚಿನಲ್ಲಿರುವ ಶ್ರೀತಾಳೆ ಗಿಡ ನೆಡುವ ಮೂಲಕ ಹುತಾತ್ಮ ಯೋಧರಿಗೆ ಗೌರವ ನಮನವನ್ನು ಇತ್ತೀಚೆಗೆ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಮಣಿಪಾಲ ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣ, ಸಹ ನಿರ್ದೇಶಕ ಡಾ.ಸೋಮಶೇಖರಭಟ್ ನೆರವೇರಿಸಿ ದರು. ಪರಿಸರ ಚಿಂತಕ ಪ್ರೊ.ಎಸ್.ಎ.ಕೃಷ್ಣಯ್ಯ ಕಾರ್ಗಿಲ್-ಕಾಡು/ವಂದೇ ಮಾತರಂ ಕಾಡು ಬೆಳೆಸುವ ಉದ್ಧೇಶದಿಂದ 527 ಶ್ರೀತಾಳೆ ಕಾಯಿ/ಬೀಜಗಳನ್ನು ಹುತಾತ್ಮ ಯೋಧರ ಗೌರವಾರ್ಥ ಸಮರ್ಪಿಸಿದರು. ವಿನಾಶದಂಚಿನಲ್ಲಿರುವ ಕೆಂಪು-ಪಟ್ಟಿಗೆ ಸೇರಿದ ಹಲವು ಮರಗಿಡಗಳ ಕಾಯಿ ಬೀಜಗಳನ್ನು ರಾಜ್ಯದ ವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ ಪ್ರತಿವರ್ಷ ನೀಡುವುದಾಗಿ ಅವರು ತಿಳಿಸಿದರು.
ಎಂಐಟಿಯ ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಹೊಳ್ಳ, ಮುಖ್ಯ ಭದ್ರತಾ ಅಧಿಕಾರಿ ರತ್ನಾಕರ್ ಸಾಮಂತ್ ಮತ್ತು ಸಿಎಸ್‌ಇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮ್ಯೂಸಿಕ ಸುಪ್ರಿಯ ಉಪಸ್ಥಿತರಿದ್ದರು.
Next Story