ನ.6ರಂದು ಜಿ.ಶಂಕರ್‌ಗೆ ಪಂಚವರ್ಣ ರಾಜ್ಯೋತ್ಸವ ಗೌರವ

ಕೋಟ, ಅ.9: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ನಡೆಸಲ್ಪಡುವ ಕನ್ನಡ ರಾಜ್ಯೋತ್ಸವ ಸದ್ಭಾವನಾ 2026ರ ನಾಡುನುಡಿಗೆ ಭಾವ ನಮನ ಕಾರ್ಯಕ್ರಮ ನ.6ರಂದು ಸಂಜೆ ಕೋಟದ ಮಾಂಗಲ್ಯ ಮಂದಿರದ ಎದುರಿನ ಮೈದಾನದಲ್ಲಿ ಜರಗಲಿದೆ.
ಈ ಪ್ರಯುಕ್ತ ರಾಜ್ಯದ ಪ್ರಸಿದ್ಧ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನ ಕಾರ್ಯಕ್ರಮ ಜರಗಲಿದ್ದು ಸಮಾಜ ಸೇವಕ ಡಾ.ಜಿ ಶಂಕರ್ ಫ್ಯಾುಲಿ ಟ್ರಸ್ಟ್ ಪ್ರವರ್ತಕ ಜಿ ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು. ಉದ್ಯಮ ಕ್ಷೇತ್ರದ ಸಾಧಕ ಕಂಡ್ಲೂರು ಕೆ.ಎನ್.ಶ್ರೀನಿವಾಸ ಜೋಗಿ ಬೆಂಗಳೂರು ಇವರಿಗೆ ಶೇಷ ಪುರಸ್ಕಾರ, ಅಂತಾರಾಷ್ಟ್ರೀಯ ಕರಾಟೆಪಟು ಜಯ ಪೂಜಾರಿ ಹರ್ತಟ್ಟು ಅವರಿಗೆ ಶೇಷ ಅಭಿನಂದನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story




