ಫೆ.6ರಿಂದ 8ರವರೆಗೆ ಕೃಷ್ಣಮಠದಲ್ಲಿ ಪುರಂದರದಾಸರ ಕೀರ್ತನೆಗಳ ಸ್ಪರ್ಧೆ

ಉಡುಪಿ, ಫೆ.4: ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ದಾಸಶ್ರೇಷ್ಠ ಶ್ರೀಪುರಂದರದಾಸರ ಆರಾಧನೆ ಫೆ.9ರ ಶುಕ್ರವಾರ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ತಿಳಿಸಿದ್ದಾರೆ.
ಈ ಪ್ರಯುಕ್ತ ಫೆ.6ರಿಂದ 8ರವರೆಗೆ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಸಾರ್ವಜನಿಕರಿಗೆ ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ವೈಯಕ್ತಿಕ ಹಾಗೂ ಸಾಮೂಹಿಕ (10ಮಂದಿ) ವಿಭಾಗಗಳಲ್ಲಿ ನಡೆಯಲಿದೆ. ಆಸಕ್ತರು ಮೊ: 9480351106 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Next Story





