ಹೂಡಿಕೆ ಮಾಡಿದ ಲಕ್ಷಾಂತರ ರೂ. ಹಣ ವಾಪಾಸ್ಸು ನೀಡದೆ ವಂಚನೆ; ಪ್ರಕರಣ ದಾಖಲು

ಕಾರ್ಕಳ: ಹೂಡಿಕೆ ಮಾಡಿದ ಲಕ್ಷಾಂತರ ರೂ. ಹಣ ವಾಪಾಸ್ಸು ನೀಡದೆ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಯ್ ಹಾಗೂ ಇತರರು 2024ರ ಆ.6ರಂದು ರಾಜೇಶ್ವರಿ ಎಂಬವರಿಗೆ ಕರೆ ಮಾಡಿ ಗೋಲ್ಡ್ ಮೈನಿಂಗ್ ಟ್ರೇಡಿಂಗ್‌ಗೆ ಹಣ ಹೂಡಿಕೆ ಮಾಡಿದರೇ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅದರಂತೆ ರಾಜೇಶ್ವರಿ ಒಟ್ಟು 66,27,634ರೂ. ಹಣವನ್ನು ಆರೋಪಿತರ ಬೇರೆ ಬೇರೆ ಖಾತೆಗೆ ಜಮೆ ಮಾಡಿದ್ದರು. ಆದರೆ ಆರೋಪಿಗಳು ಆ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





