76 ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ವಿತರಣೆ

ಉಡುಪಿ, ಜು.12: ಉಡುಪಿ ನಗರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಶೇ.7.25 ಬಡಜನರ ಕಲ್ಯಾಣ ಕಾರ್ಯಕ್ರಮದ ಯೋಜನೆಯಡಿ 76 ಮಂದಿ ಫಲಾನುಭವಿಗಳಿಗೆ ಮಂಜೂರಾದ ಟೈಲರಿಂಗ್ ಯಂತ್ರಗಳನ್ನು ಶನಿವಾರ ನಗರಸಭೆ ಸಭಾಂಗಣದಲ್ಲಿ ವಿತರಿಸಲಾಯಿತು.
ಯಂತ್ರಗಳನ್ನು ವಿತರಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಫಲಾನುಭವಿಗಳಿಗೆ ವಿತರಿಸುವ ಮೂಲಕ ಆರ್ಥಿಕವಾಗಿ ಹಿಂದು ಳಿದ ಅರ್ಹ ವ್ಯಕ್ತಿಗಳಿಗೆ ಟೈಲರಿಂಗ್ ವೃತ್ತಿ ನಡೆಸಿ ಸ್ವಾವಲಂಬಿ ಬದುಕು ರೂಪಿಸಲು ಸಹಕಾರ ನೀಡಿದಂತಾಗಿದ್ದು, ಮುಂದಿನ ದಿನಗಳಲ್ಲಿಯೂ ಸ್ವ ಉದ್ಯೋಗ ನಡೆಸಲು ಮುಂದಾಗುವ ವ್ಯಕ್ತಿಗಳಿಗೆ ನಗರಸಭೆ ಮೂಲಕ ಸದಾ ಸಹಕಾರ ನೀಡಲು ವಿಶೇಷ ಆದ್ಯತೆ ವಹಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.
Next Story





