ಮಾ.9ರಂದು ಪೊಲೀಸರಿಂದ ಮ್ಯಾರಥಾನ್

ಸಾಂದರ್ಭಿಕ ಚಿತ್ರ
ಉಡುಪಿ, ಮಾ.5: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಮ್ಮ ಪೊಲೀಸ್, ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡ್ರಗ್ಸ್ ಮುಕ್ತ ಕರ್ನಾಟಕ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಪೊಲೀಸ್ ಮತ್ತು ಎಸ್ಬಿಐ ಸಹಯೋಗದೊಂದಿಗೆ 5 ಕಿ.ಮೀ. ಹಾಗೂ 10 ಕಿ.ಮೀ. ಮ್ಯಾರಥಾನ್ನ್ನು ಮಾ.9ರಂದು ಆಯೋಜಿಸಲಾಗಿದೆ.
ಈ ಮ್ಯಾರಥಾನ್ ಬೆಳಿಗ್ಗೆ 6 ಗಂಟೆಗೆ ಅಜ್ಜರಕಾಡು ಮೈದಾನದಿಂದ ಪ್ರಾರಂಭವಾಗಲಿದ್ದು, ಸಾರ್ವಜನಿಕರು ಹಾಗೂ ಇತರ ಇಲಾಖೆಯ ಸರಕಾರಿ ನೌಕರರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





